bjp-sukumaran-daughter2

ಸಿಪಿಎಂ ಗೂಂಡಾಗಳಿಂದ ಕಾಪಾಡಿ ಎಂದು ಕೇಳಿಕೊಳ್ಳುತ್ತಿರುವ ಬಿಜೆಪಿ ಮುಖಂಡನ ಪುತ್ರಿ

ಕೇರಳದಲ್ಲಿ ಕಮ್ಯುನಿಸ್ಟರು ಬಿಜೆಪಿ ನಾಯಕರು ಕಾರ್ಯಕರ್ತರ ಮೇಲೆ ದಾಳಿ ನಡೆಸುವುದು ನಿರಂತರವಾಗಿ ವರದಿಯಾಗುತ್ತಲೇ ಇರುತ್ತದೆ. ಇದೀಗ ಸಿಪಿಎಂ ಕಾರ್ಯಕರ್ತರಿಂದ ತಮ್ಮ ಕುಟುಂಬಕ್ಕೆ ಪ್ರಾಣಾಪಾಯವಿದೆ ಎಂದು ಯುವತಿಯೊಬ್ಬರು ಹೇಳಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಅಗಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿಪಿಎಂ ಜೀವ ಬೆದರಿಕೆಗಳನ್ನು ಒಟ್ಟುತ್ತಿದೆ ಎಂದು ಆ ಯುವತಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಆ ವೀಡಿಯೋ ವೈರಲ್ ಆಗಿದೆ.

ಈ ಹಿಂದೆ ಸಿಪಿಎಂ ಪಕ್ಷದ ಕಾರ್ಯಕರ್ತನಾಗಿದ್ದ ಕಾಸರಗೋಡು ಜಿಲ್ಲೆಯ ಸುಕುಮಾರನ್ ಎಂಬ ವ್ಯಕ್ತಿ, ತಮನ್ನು ಪಕ್ಷದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ಇತ್ತೀಚೆಗೆ ಪಕ್ಷ ತೊರೆದಿದ್ದರು. ಸಿಪಿಎಂ ಗೆ ಗುಡ್ ಬೈ ಹೇಳಿದ ನಂತರ ಅವರು ಬಿಜೆಪಿಗೆ ಸೇರ್ಪಡೆಯಾದರು.

ಇದೇ ನೆಪದಲ್ಲಿ ಸಿಪಿಎಂ ನಮ್ಮ ತಂದೆಯ ವಿರುದ್ಧ ದ್ವೇಷ ಸಾಧಿಸುತ್ತಿದೆ ಎಂದು ಸುಕುಮಾರ್ ಪುತ್ರಿ ಅಶ್ವಿನಿ ಆರೋಪಿಸುತ್ತಿದ್ದಾರೆ. ಇದನ್ನೇ ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು.

ಮಗಳನ್ನು ಶಾಲೆಯಿಂದ ಕರೆತರುತ್ತಿರುವ ಸಂದರ್ಭದಲ್ಲಿ ಸಿಪಿಎಂ ಕಾರ್ಯಕರ್ತರು ಅಡ್ಡಗಟ್ಟಿ, ಆತನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಗಳು ಕೇಳಿ ಬಂದಿದ್ದವು. ಪೊಲೀಸರಿಗೆ ದೂರು ನೀಡಿದರೂ ಹೆದರುವುದಿಲ್ಲ ಎಂದು ಬೆದರಿಸಿದ್ದರು ಎನ್ನಲಾಗಿದೆ. ಇವುಗಳನ್ನೆಲ್ಲಾ ಸುಕುಮಾರನ್ ಪುತ್ರಿ ವೀಡಿಯೋದಲ್ಲಿ ಹೇಳಿದ್ದಾಳೆ.

ಹೀಗೇ ಆದರೆ, ಭಾರತಕ್ಕೆ ಪಾಕ್ ವಿರುದ್ಧ ಯುದ್ಧವೊಂದೇ ಆಯ್ಕೆ

ಶಾಲೆಗೆ ಹೋಗಲೂ ಭಯವಾಗುತ್ತಿದೆ, ಕದ್ದು ಮುಚ್ಚಿ ಅಡ್ಡದಾರಿಯಲ್ಲಿ ಹೋಗಬೇಕಿದೆ. ಸಿಪಿಎಂ ಕಾರ್ಯಕರ್ತರು ನಮ್ಮ ತಂದೆಯನ್ನು ಕೊಲ್ಲುತ್ತಾರೆ, ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಆಕೆ ವೀಡಿಯೋದಲ್ಲಿ ತನ್ನ ಆತಂಕವನ್ನು ಬಿಚ್ಚಿಟ್ಟಿದ್ದಾಳೆ.

ತನಿಖೆ ನಡೆಸುತ್ತಿದ್ದ ಅಧಿಕಾರಿಯಿಂದಲೇ 8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ

ಸುಕುಮಾರನ್ ಆ ಪ್ರದೇಶದಲ್ಲಿ ಪ್ರಬಲ ನಾಯಕನಾಯಕ, ಹಾಗಾಗಿಯೇ ಆತನಿಗೆ ಸಿಪಿಎಂ ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆಗಳ ಹಿಂದೆ ಯಾರಿದ್ದಾರೆಂಬುದನ್ನು ತಿಳಿಸಬೇಕು ಎಂದು ಬಿಜೆಪಿ ಪ್ರತಿಭಟನೆಯೂ ನಡೆಸಿತು. ಸುಕುಮಾರ್ ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Get Latest updates on WhatsApp. Send ‘Subscribe’ to 8550851559