ಕಳ್ಳ ಮಲ್ಯಾ ಕ್ರಿಕೆಟ್ ನೋಡಲು ಬಂದಾ: ಅಭಿಮಾನಿಗಳಿಂದ ಅಪಹಾಸ್ಯ

ಲಂಡನ್: ಭಾರತದಲ್ಲಿ ಹಲವು ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡದೆ ದೇಶದಿಂದ ಪರಾರಿಯಾಗಿ ಲಂಡನ್ ನಲ್ಲಿ ವೈಭವೋಪೇತ ಜೀವನ ನಡೆಸುತ್ತಿರುವ ವಿಜಯ್ ಮಲ್ಯಾ ರವರಿಗೆ ಲಂಡನ್ ನಲ್ಲಿ ಕಹಿ ಅನುಭವ ಎದುರಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯವನ್ನು ನೋಡಲು ಓವಲ್ ಕ್ರೀಡಾಂಗಣಕ್ಕೆ ವಿಜಯ್ ಮಲ್ಯ ಆಗಮಿಸಿದ್ದರು. ಆದರೆ ಮಲ್ಯ ಕ್ರೀಡಾಂಗಣದೊಳಗೆ ಹೋಗುವಾಗ ಅಲ್ಲಿದ್ದ ಭಾರತೀಯರು ಕಳ್ಳಾ ಕಳ್ಳಾ ವಿಜಯ್ ಮಲ್ಯಾ ಕಳ್ಳಾ, ಹಣ ತೆಗೆದುಕೊಂಡು ಪರಾರಿಯಾದ ವಂಚಕ, ನಮ್ಮ ಹಣ ನಮಗೆ ಕೊಟ್ಟುಬಿಡು ಎಂದು ಘೋಷಣೆ ಹಿಂದಿಯಲ್ಲಿ ಘೋಷಣೆ ಕೂಗಿ ಗೇಲಿ ಮಾಡಿದ್ದಾರೆ. ಹೀಗೆ ಗೇಲಿ ಮಾಡುತ್ತಿದ್ದವರನ್ನು ಏನೂ ಅನ್ನಲಾಗದೆ ತಲೆ ಬಗ್ಗಿಸಿ ಕ್ರೀಡಾಂಗಣದೊಳಕ್ಕೆ ಹೋದರು ಮಲ್ಯಾ. ಈ ಸಂದರ್ಭದಲ್ಲಿ ಹಲವು ಮಲ್ಯಾ ರೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದು ವಿಶೇಷ.

ಮಲ್ಯಾ ಸ್ಟೇಡಿಯಂ ಪ್ರವೇಶಿಸುವಾಗ ಭಾರತದ ಕ್ರಿಕೆಟ್ ಅಭಿಮಾನಿಗಳು ಜೋರಾಗಿ ಹಿಂದಿನಿಂದ ಕಳ್ಳ, ಕಳ್ಳ ಎಂದು ಕೂಗಿದ ವೀಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಫೌಂಡೇಷನ್ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನವಿಲ್ಲದಿದ್ದರೂ ಹಾಜರಾಗಿದ್ದ ವಿಜಯ್ ಮಲ್ಯಾ ಟೀಮ್ ಇಂಡಿಯಾಗೆ ಇರಿಸುಮುರಿಸು ಉಂಟುಮಾಡಿದ್ದರು.

ವಿವಿಧ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿರುವ ಮಲ್ಯಾ ರವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದೆ.