ಕ್ರಿಮಿನಲ್ ಗಳಿಗೆ ಜೈಲು ಅಥವಾ ಪೊಲೀಸ್ ಎನ್ಕೌಂಟರ್ ನಲ್ಲಿ ಹತ್ಯೆ – News Mirchi

ಕ್ರಿಮಿನಲ್ ಗಳಿಗೆ ಜೈಲು ಅಥವಾ ಪೊಲೀಸ್ ಎನ್ಕೌಂಟರ್ ನಲ್ಲಿ ಹತ್ಯೆ

ರಾಜ್ಯದಲ್ಲಿ ಕ್ರಿಮಿನಲ್ ಗಳನ್ನು ಜೈಲಿಗೆ ಕಳುಹಿಸಲಾಗುವುದು ಅಥವಾ ಪೊಲೀಸ್ ಎನ್ಕೌಂಟರ್ ಗಳಲ್ಲಿ ಕೊಲ್ಲಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿರುವ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಾಜಿಯಾಬಾದ್ ನ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಯೋಗಿ ಈ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣಾ ಕಣದಿಂದ ಹಿಂದೆ ಸರಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ

ರಾಜ್ಯದಲ್ಲಿ ಅಪರಾಧಿಗಳಿಗೆ ಉಳಿಗಾಲವಿಲ್ಲದಂತೆ ಮಾಡುತ್ತೇವೆ. ಇತ್ತೀಚೆಗೆ ಕ್ರಿಮಿನಲ್ ಗಳು ರಾಜ್ಯ ಬಿಟ್ಟು ಪರಾರಿಯಾಗುತ್ತಿದ್ದಾರೆ. ಇಲ್ಲಿ ಅವರಿಗೆ ಇರುವುದು ಎರಡೇ ಸ್ಥಳಗಳು, ಅವರನ್ನು ಜೈಲಿಗಾದರೂ ಅಟ್ಟುತ್ತೇವೆ ಇಲ್ಲವೆಂದರೆ ಪೊಲೀಸ್ ಎನ್ಕೌಂಟರ್ ಗಳಲ್ಲಿ ಕೊಲ್ಲುತ್ತೇವೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯಲದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

Get Latest updates on WhatsApp. Send ‘Add Me’ to 8550851559

Loading...