ಚಿಂತೆ ಬೇಡ, ಯುದ್ಧಕ್ಕೆ ಅಗತ್ಯವಾದ ಮದ್ದುಗುಂಡು ಶೀಘ್ರದಲ್ಲೇ ಸೇನೆ ಕೈಸೇರಲಿದೆ – News Mirchi
We are updating the website...

ಚಿಂತೆ ಬೇಡ, ಯುದ್ಧಕ್ಕೆ ಅಗತ್ಯವಾದ ಮದ್ದುಗುಂಡು ಶೀಘ್ರದಲ್ಲೇ ಸೇನೆ ಕೈಸೇರಲಿದೆ

ನವದೆಹಲಿ: ವಿಶ್ವದಲ್ಲಿಯೇ ಅತಿ ದೊಡ್ಡ ಮಟ್ಟದ ಸೇನೆಯನ್ನು(ಸ್ಟ್ಯಾಂಡಿಂಗ್ ಆರ್ಮಿ) ಹೊಂದಿರುವ ಭಾರತ, ಸಾಕಷ್ಟು ಯುದ್ಧ ಸಾಮಗ್ರಿ ಸಂಗ್ರಹವಿಲ್ಲದ ಕಾರಣ ತಕ್ಷಣಕ್ಕೆ ಯುದ್ಧ ಎದುರಾದರೆ ಹತ್ತು ದಿನಗಳಿಗಿಂತ ಹೆಚ್ಚು ದಿನ ಹೋರಾಡಲು ಸಾಧ್ಯವಿಲ್ಲ ಎಂದು ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್(ಕಾಗ್) ತನ್ನ ವರದಿಯನ್ನು ಸಂಸತ್ ಗೆ ಸಲ್ಲಿಸಿತ್ತು.

ಕಾಗ್ ವರದಿ ಬೆನ್ನಲ್ಲೇ ರಕ್ಷಣಾ ಇಲಾಖೆ ಯದ್ಧಸಾಮಗ್ರಿ ಕೊರತೆ ನೀಗಿಸಲು ಮುಂದಾಗಿದೆ. ಒಂದು ಕಡೆ ಚೀನಾ ಮತ್ತೊಂದು ಕಡೆ ಪಾಕಿಸ್ತಾನಗಳು ಕಾಲುಕೆರೆದು ಜಗಳಕ್ಕೆ ಬರುತ್ತಿರುವ ಸಮಯದಲ್ಲಿ, ಸೇನೆಯನ್ನು ಕಾಡುತ್ತಿರುವ ಮದ್ದುಗುಂಡು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ತ್ವರಿತಗೊಂಡಿವೆ. ಸಾಧ್ಯವಾದಷ್ಟು ಮಾರ್ಗಗಳ ಮೂಲಕ ಆದಷ್ಟು ಬೇಗ ಮದ್ದುಗುಂಡು ಸಂಗ್ರಹವನ್ನು ಹೆಚ್ಚಿಸಲು ತೀರ್ಮಾನಿಸಿದೆ ರಕ್ಷಣಾ ಸಚಿವಾಲಯ. ಆಗಸ್ಟ್ ಮೊದಲನೇ ವಾರದ ವೇಳೆಗೆ ಯುದ್ಧ ಟ್ಯಾಂಕುಗಳಿಗೆ, ಬಂದೂಕು, ಫಿರಂಗಿಗಳಿಗೆ ಭಾರೀ ಪ್ರಮಾಣದಲ್ಲಿ ಮದ್ದುಗುಂಡುಗಳು ಸರಬರಾಜಾಗುತ್ತವೆ ಎಂದು ನಂಬಲರ್ಹ ಮೂಲಗಳು ಹೇಳಿವೆ.

ಭಾರತದ ಪಡೆಗಳಿಗೆ ಅಗತ್ಯವಾದ ಯುದ್ಧ ಸಾಮಗ್ರಿಯಲ್ಲಿ ಸದ್ಯ ಕೇವಲ ಶೇ.40 ರಷ್ಟು ಮಾತ್ರ ಲಭ್ಯವಿದೆ. ಇದನ್ನು ನೂರಕ್ಕೆ ನೂರರಷ್ಟು ಹೆಚ್ಚಿಸಲು ರಕ್ಷಣಾ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಈ ವರ್ಷಾಂತ್ಯದ ವೇಳೆಗೆ ದೀರ್ಘ ಯುದ್ಧಗಳಿಗೂ ಕೂಡಾ ಬೇಕಾಗುವ ಮದ್ದುಗುಂಡುಗಳನ್ನು ಸೇನೆಗೆ ನೀಡಲಿದೆ ಎನ್ನಲಾಗಿದೆ.

ಕಳೆದ ವರ್ಷ ಉರಿ ಉಗ್ರದಾಳಿ ನಂತರ ರಕ್ಷಣಾ ಇಲಾಖೆ ರೂ.12,000 ಕೋಟಿ ವೆಚ್ಚದೊಂದಿಗೆ ಮದ್ದುಗುಂಡು ಖರೀದಿಸಲು ಆರ್ಡರ್ ಮಾಡಿತ್ತು. ಮತ್ತೊಂದು ಕಡೆ 46 ರೀತಿಯ ಯುದ್ಧ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರಗಳನ್ನು ಆರ್ಮಿ ವೈಸ್ ಚೀಫ್ ಗೆ ನೀಡಿದೆ. ಈ ಮೂಲಕ ತ್ವರಿತ ತೀರ್ಮಾನ ಕೈಗೊಳ್ಳುವ ಅವಕಾಶವಿರುತ್ತದೆ ಎಂದು ರಕ್ಷಣಾ ಇಲಾಖೆ ಭಾವಿಸುತ್ತಿದೆ.

ನವಾಜ್ ಷರೀಫ್ ಗೆ ಶಿಕ್ಷೆಯಾದರೆ, ಅವರ ತಮ್ಮನೇ ಪ್ರಧಾನಿ?

ಭಾರತೀಯ ಸೇನೆಗೆ ಅಗತ್ಯವಾದ ಮದ್ದುಗುಂಡು ಸಾಮಗ್ರಿಯಲ್ಲಿ ಶೇ.90 ರಷ್ಟು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್(ಒ.ಎಫ್.ಬಿ) ಯಿಂದಲೇ ಸರಬರಾಜು ಆಗುತ್ತಿದೆ. ಆದರೆ 2013 ರಿಂದ ಇಟ್ಟುಕೊಂಡ ಗುರಿಗಳನ್ನು ತಲುಪಲು ಒ.ಎಫ್.ಬಿ ವಿಫಲವಾಗಿದೆ ಎಂದು ಕಾಗ್ ವರದಿಯಲ್ಲಿ ಬಹಿರಂಗವಾಗಿದೆ.

Contact for any Electrical Works across Bengaluru

Loading...
error: Content is protected !!