ಮಾಸ್ತಿಗುಡಿ ಚಿತ್ರತಂಡಕ್ಕೆ ಬಂಧನದ ಭೀತಿ

ಚಿತ್ರೀಕರಣ ವೇಳೆ ದುರಂತ ಸಂಭವಿಸಿ ಮಾಸ್ತಿಗುಡಿ ಚಿತ್ರದ ಇಬ್ಬರು ಕಲಾವಿದರು ಸಾವನ್ನಪ್ಪಿದ ವಿಷಯಕ್ಕೆ ಸಂಬಂಧಿಸಿದಂತೆ ಈಗ ಚಿತ್ರ ತಂಡಕ್ಕೆ ಬಂಧನದ ಭೀತಿ ಎದುರಾಗಿದೆ.ಚಿತ್ರ ತಂಡದ ವಿರುದ್ಧ ಈಗಾಗಲೇ ಪೊಲೀಸರು ಕ್ರಿಮಿನಲ್ ದೂರು ದಾಖಲಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮ ಮತ್ತು ನಿರ್ಮಾಪಕ ಸುಂದರ್ ವಿರುದ್ಧ ಸೆಕ್ಷನ್ 188, 304 ಅಡಿಯಲ್ಲಿ ದೂರು ದಾಖಲಾಗಿದೆ.

ಬಂಧನದ ಭೀತಿ ಎದುರಿಸುತ್ತಿರುವ ಚಿತ್ರ ತಂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಪ್ರಯತ್ನ ನಡೆಸುತ್ತಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆಂದು ಹಲವರು ಆರೋಪಿಸಿದ್ದಾರೆ. ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು, ನೀರಿಗೆ ಧುಮುಕಿದ ನಟರಿಗೆ ಈಜು ಬರುತ್ತಿರಲಿಲ್ಲವೆನ್ನಲಾಗಿದೆ. ಸಮಯಕ್ಕೆ ಸರಿಯಾಗಿ ಬೋಟ್ ಬಾರದಿದ್ದದ್ದೂ ಈ ಅವಘಡ ನಡೆಯಲು ಕಾರಣವಾಯಿತು. ಮೃತ ನಟರ ಮೃತದೇಹಗಳು ಇದುವರೆಗೂ ಪತ್ತೆಯಾಗಿಲ್ಲ.