ಕನಕಪುರ: ಕೆರೆಗಿಳಿದಿದ್ದ ವ್ಯಕ್ತಿಯ ಕೈ ತಿಂದ ಮೊಸಳೆ, ಆಸ್ಪತ್ರೆಗೆ ದಾಖಲು – News Mirchi

ಕನಕಪುರ: ಕೆರೆಗಿಳಿದಿದ್ದ ವ್ಯಕ್ತಿಯ ಕೈ ತಿಂದ ಮೊಸಳೆ, ಆಸ್ಪತ್ರೆಗೆ ದಾಖಲು

ಕನಕಪುರ: ವಾರಂತ್ಯವಾದ ಕಾರಣ ಗೆಳತಿ ಮತ್ತು ತನ್ನ ಎರಡು ನಾಯಿಗಳ ಜೊತೆ ರಾಮನಗರ ಬಳಿಯ ತಟ್ಟೆಕೆರೆಗೆ ತೆರಳಿದ್ದ ಬೆಂಗಳೂರಿನ ಮುದಿತ್ ಎಂಬಾತನ ಎಡಗೈಯನ್ನು ಕೆರೆಯಲ್ಲಿದ್ದ ಮೊಸಳೆಯೊಂದು ಕಚ್ಚಿ ತಿಂದ ದುರ್ಘಟನೆ ಭಾನುವಾರ ನಡೆದಿದೆ. ನಾಗಪುರ ಮೂಲದ ಮುದಿತ್ ದಂದ್ವಾಟೆ(26) ಕೈ ಕಳೆದುಕೊಂಡವರು.

ಕೆರೆಯ ನೀರಿಗೆ ಇಳಿದಿದ್ದ ನಾಯಿಗಳನ್ನು ಹೊರಗೆ ತರಲು ಮೊಸಳೆಗಳಿವೆ ಎಂಬ ಸೂಚನಾ ಫಲಕವನ್ನು ಗಮನಿಸದೆ ಮುದಿತ್ ನೀರಿಗಿಳಿದು ನಾಯಿಗಳನ್ನು ಹೊರಗೆ ಕರೆತರಲು ಪ್ರಯತ್ನಿಸುತ್ತಿದ್ದರು. ಆಗ ಮೊಸಳೆಯೊಂದು ಮುದಿತ್ ಅವರ ಮೇಲೆ ದಾಳಿ ಮಾಡಿದ್ದು, ಅವರ ಎಡ ಮೊಣಕೈ ಕೆಳಗಿನ ಭಾಗವನ್ನು ಸಂಪೂರ್ಣ ಕಚ್ಚಿ ತಿಂದಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ, ಮುದಿತ್ ಅವರನ್ನು ನಗರದ ಹಾಸ್ ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಮುದಿತ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮೊಸಳೆ ಕಡಿತವು ವಿಷಕಾರಿಯಾಗಿದ್ದು, ಡಿಬ್ರೈಡ್ಮೆಂಟ್ ಎಂಬ ವೈದ್ಯಕೀಯ ಪ್ರಕ್ರಿಯೆಯಂತೆ ಚಿಕಿತ್ಸೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವು ಬಾರಿ ಗಾಯಗೊಂಡ ಕೈಯನ್ನು ಸ್ವಚ್ಛಗೊಳಿಸಿ ಯಾವುದೇ ಸೋಂಕು ಇಲ್ಲ ಎಂಬುದು ಖಚಿತಪಡಿಸಿಕೊಳ್ಳಲಾಗುತ್ತದೆ. ಮೂರು ತಿಂಗಳ ನಂತರ ಕೃತಕ ಕೈ ಜೋಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಮತ್ತೊಂದು ಕಡೆ ನಿಷೇಧಿತ ಅರಣ್ಯ ಪ್ರದೇಶದೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿದ್ದಕ್ಕಾಗಿ ಮುದಿತ್ ದಂದ್ವಾಟೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Contact for any Electrical Works across Bengaluru

Loading...
error: Content is protected !!