ಆ ಶ್ವಾನದಿಂದ ಹಲವು ಯೋಧರ ಜೀವ ಉಳಿದವು

ವಾಸನೆ ಹಿಡಿದು ನಾಯಿಗಳು ಏನು ಬೇಕಾದರೂ ಪತ್ತೆ ಹಚ್ಚಬಲ್ಲವು. ಸಿಆರ್ಪಿಎಫ್ ನಲ್ಲಿಯೂ ಹೀಗೆ ತರಬೇತಿ ಪಡೆದ ನಾಯಿಗಳಿವೆ. ಅದರಲ್ಲೊಂದು ನಾಯಿ ಆಕ್ಸೆಲ್. ಒಡಿಶಾದ ರಾಯಘಡ್ ಜಿಲ್ಲೆಯಲ್ಲಿನ ಹತಮುನಿಗೂಡ ಬಳಿ ನಕ್ಸಲರು ಐದು ಕೆಜಿ ಐಇಡಿ(ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಸ್ಪೋಟಕ ವಸ್ತುವನ್ನು ನೆಲದಲ್ಲಿ ಹುದುಗಿಸಿಟ್ಟಿದ್ದರು. ಇದನ್ನು ಆಕ್ಸೆಲ್ ಎಂಬ ಶ್ವಾನ ಪತ್ತೆ ಹಚ್ಚಿ ಹಲವು ಸಿಆರ್ಪಿಎಫ್ ಯೋಧರ ಜೀವ ಉಳಿಸಿದೆ. ಆದರೆ ಇದನ್ನು ಪತ್ತೆ ಹಚ್ಚುವ ವೇಳೆ ಅದರ ಕಾಲು, ಕಣ್ಣಿಗೆ ತೀವ್ರ ಗಾಯಗಳಾಗಿವೆ. ನಂತರ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಅದನ್ನು ನಿಷ್ಕ್ರಿಯಗೊಳಿಸಿದೆ.

ಈ ಸ್ಪೋಟಕವನ್ನು ನಕ್ಸಲರು ಸ್ಪೋಟಿಸಿದ್ದರೆ, ಅತ್ತ ಕೂಂಬಿಂಗ್ ಗೆ ಹೋಗುವ ಸಿಅರ್ಪಿಎಫ್ ಪಡೆಗಳಿಗೆ ಅಪಾರ ಪ್ರಮಾಣದ ಜೀವಹಾನಿಯಾಗುತ್ತಿತ್ತು. ಇತ್ತೀಚೆಗೆ ನಡೆದ ಭಾರೀ ಪ್ರಮಾಣದ ಎನ್ಕೌಂಟರ್ ನಂತರ ಕಲಹಂಡಿ, ಕೊಂದಮಾಲ್, ರಾಯಘಡ ಜಿಲ್ಲೆಗಳಲ್ಲಿ ಸಿಆರ್ಪಿಎಫ್, ಒಡಿಶಾ ಪೊಲೀಸರು ಕೂಂಬಿಂಗ್ ಕಾರ್ಚರಣೆ ನಡರಸುತ್ತಿದ್ದಾರೆ. ಎನ್ಕೌಂಟರ್‌ಗೆ ಸೇಡು ತೀರಿಸಿಕೊಳ್ಳಲು ನಕ್ಸಲರು ಈ ಐಇಡಿ ಯನ್ನು ಅಳವಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಏಳು ವರ್ಷ ವಯಸ್ಸಿನ ಆಕ್ಸೆಲ್ ಎಂಬ ಶ್ವಾನ ಕಳೆದ ನಾಲ್ಕು ವರ್ಷಗಳಿಂದ ಸಿಆರ್ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದೆ.