ಭೂಗತ ಪಾತಕಿ ದಾವೂದ್ ಭಂಟ ಲಾಲಾ ಬಂಧನ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಗಟ್ಟಿ ಹೊಡೆತವೇ ನೀಡಿದೆ ಗುಜರಾತ್ ನ ಉಗ್ರ ನಿಗ್ರಹ ಪಡೆ. ದಾವೂದ್ ಗ್ಯಾಂಗ್ ನ ಪ್ರಮುಖ ಗ್ಯಾಂಗ್ಸ್ಟರ್ ದಾವೂದ್ ಲಾಲಾನನ್ನು ಅಹಮದಾಬಾದಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಾಲಾನಿಗಾಗಿ ಪೊಲೀಸರು ತುಂಬಾ ದಿನಗಳಿಂದ ಹುಡುಕುತ್ತಿದ್ದರು. ರಾಜಸ್ತಾನದಲ್ಲಿ ನಡೆದ ಹಲವು ಅಪರಾಧ ಕೃತ್ಯಗಳಲ್ಲೂ ಲಾಲಾ ಭಾಗಿಯಾಗಿದ್ದಾನೆ.

ದಾವೂದ್ ಗೆ ಸೇರಿದ ಗ್ಯಾಂಗ್ ಗಳನ್ನು ರಾಜಸ್ಥಾನ, ಗುಜರಾತ್ ಗಳಲ್ಲಿ ಲಾಲಾನೇ ನಿರ್ವಹಿಸುತ್ತಿದ್ದ ಎಂದು ಉಗ್ರ ನಿಗ್ರಹ ಪಡೆ ಬಳಿ ಮಾಹಿತಿ ಇದೆ. ಲಾಲಾನನ್ನು ಅರೆಸ್ಟ್ ಮಾಡಿದ ಗುಜರಾತ್ ಎಟಿಎಸ್(ಯಾಂಟಿ ಟೆರರಿಸ್ಟ್ ಸ್ಕ್ವಾಡ್), ಆತನ ಕುಟುಂಬದ ಪತ್ತೆ ಕಾರ್ಯದಲ್ಲಿ ತೊಡಗಿದೆ. ಲಾಲಾ ಬಂಧನವಾಗುತ್ತಿದ್ದಂತೆ ಆತನ ಸಹೋದರರು ತಲೆಮರೆಸಿಕೊಂಡಿದ್ದಾರೆ.

Loading...

Leave a Reply

Your email address will not be published.

error: Content is protected !!