ದಲಿತ ವಚನಕಾರರ ಜಯಂತಿ ಅಚರಣೆಗೆ ತಾಲೂಕು ಆಡಳಿತ ನಿರ್ಲಕ್ಷ : ದಲಿತ ಮುಖಂಡರ ಆಕ್ರೋಶ

ಚಿಂತಾಮಣಿ, ಫೆ. 13 : ಸಮಾಜಮುಖಿ ಸಂದೇಶಗಳನ್ನು ಸಾರಿ, ಸಮಾಜ ಘಾತುಕ ಚಟುವಟಿಕೆಗಳನ್ನು ತಮ್ಮ ವಚನಗಳ ಮೂಲಕ ತಿದ್ದುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ದಲಿತ ವಚನಕಾರರನ್ನು ಕಡೆಗಣಿಸಿ ದಲಿತ ವಚನಕಾರರ ಜಯಂತಿಯ ಆಚರಣೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ತಾರತಮ್ಯ ಹಾಗೂ ನಿರ್ಲಕ್ಷ ದೋರಣೆ ತೋರಿದೆ ಎಂದು ತಾಲೂಕಿನ ದಲಿತ ಮುಖಂಡರು ದೂರಿದ್ದಾರೆ.

ಫೆಬ್ರವರಿ 13, ಮಂಗಳವಾರಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯು ದಲಿತ ವಚನಕಾರರ ಜಯಂತಿ ಸಮಾರಂಭವನ್ನು ನಗರದ ತಾಲೂಕು ಕಛೇರಿ ಆವರಣದಲ್ಲಿ ಆಯೋಜಿಸಿತು. ಆದರೆ ಪ್ರಚಾರದ ಕೊರತೆಯಿಂದ ಜಯಂತಿಗೆ ಯಾವುದೇ ಗಣ್ಯರಾಗಲಿ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಆಗಮಿಸದ ಕಾರಣ ಜಯಂತಿ ಸಮಾರಂಭಕ್ಕೆ ಆಗಮಿಸಿದ್ದ ಬೆರಳೆಣಿಕಯಷ್ಟು ಗಣ್ಯರು ಕೋಪಗೊಂಡು ವಾಪಸ್ಸಾದರು.

ವಚನಕಾರರ ಭಾವ ಚಿತ್ರಗಳೇ ಇಲ್ಲ

ಸಮಿತಿಯು ಎಲ್ಲಾ ಜಯಂತಿಗಳಲ್ಲಿ ಅವರವರ ಭಾವ ಚಿತ್ರಗಳನ್ನು ಪೂಜಿಸಿ ಗೌರವ ಸಲ್ಲಿಸುತ್ತಿತ್ತು. ಆದರೆ ದಲಿತ ವಚನಕಾರರಲ್ಲಿ ಮಾದಾರ ಚನ್ನಯ್ಯ, ದೋಹರ ಕಕ್ಕಯ್ಯ, ಸಾಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಲಿಂಗ ಪೆದ್ದ ಮತ್ತು ಶಿವನಾಗಮಯ್ಯ ಸೇರಿದಂತೆ ಹತ್ತಾರು ದಲಿತ ವಚನಕಾರರು ಇದ್ದಾರೆ. ಆದರೆ ಇಷ್ಟೊಂದು ವಚನಕಾರರು ಇದ್ದರೂ ಈ ಪೈಕಿ ಕನಿಷ್ಠ ಒಬ್ಬ ವಚನಕಾರರ ಭಾವಚಿತ್ರವನ್ನೂ ಸಹ ತಾಲೂಕು ಆಡಳಿತ ಜಯಂತಿ ಸಮಾರಂಭದಲ್ಲಿಟ್ಟು ಪೂಜಿಸಲಿಲ್ಲವೆಂದು ದಲಿತ ಮುಖಂಡರು ದೂರಿದರು.

ಬೆರಳ್ಳೆಣಿಕೆಯಷ್ಟು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭಾಗಿ

ದಲಿತ ವಚನಕಾರರ ಜಯಂತಿಯಲ್ಲಿ ಕೇವಲ ತಾ.ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್. ನಾರಾಯಣಸ್ವಾಮಿ, ಶಿಕ್ಷಣ ಇಲಾಖೆಯ ಚಂದ್ರಶೇಖರ್, ನಾಗರಾಜ್, ಜನಾರ್ಧನರೆಡ್ಡಿ ಹಾಗೂ ಜನ ಪ್ರತಿನಿಧಿಗಳಲ್ಲಿ ತಾ.ಪಂ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್, ಭೋವಿ ಮಹಾ ಸಭೆಯ ಅಧ್ಯಕ್ಷ ಗುರಪ್ಪ, ಜಾನಪದ ಕಲಾವಿದ ನಾರಮಾಕಳಹಳ್ಳಿ ಮುನಿರೆಡ್ಡಿ, ಕವಿ ಮೂಡಲಿಗೊಲ್ಲಹಳ್ಳಿ ನರಸಿಂಹಪ್ಪ, ಮಾತ್ರ ಭಾಗವಹಿಸಿದ್ದು ಖೇದಕರ ಸಂಗತಿಯೆಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಚಿನ್ನಸಂದ್ರ ಗ್ರಾ.ಪಂ.ಯಲ್ಲಿ ಎಂಸಿ ಬೆಂಬಲದಿಂದ ಗೆದ್ದ ಸದಸ್ಯರಲ್ಲಿ ಬಿರುಕು

ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಆಚರಿಸುವ ಎಲ್ಲಾ ಜಯಂತಿಗಳಿಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸ್ತಬ್ಧ ಚಿತ್ರಗಳ ಮೆರವಣಿಗೆಯಿಂದ ಹಿಡಿದು ವೇದಿಕೆ ಕಾರ್ಯಕ್ರಮದವರೆಗೂ ಭಾಗವಹಿಸುವ ಅಧಿಕಾರಿಗಳು, ದಲಿತ ವಚನಕಾರರ ಜಯಂತಿಯಲ್ಲೇಕೆ ಭಾಗವಹಿಸಿಲ್ಲವೆಂದು ಪ್ರಶ್ನಿಸಿದರು.

ದಲಿತ ವಚನಕಾರರ ಜಯಂತಿ ಅಚರಣೆ ಕುರಿತು ಪ್ರತಿಕ್ರಿಯಿಸಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ನಡಂಪಲ್ಲಿ ಶ್ರೀನಿವಾಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ದಲಿತ ವಚನಕಾರರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಜಯಂತಿ ಕಾರ್ಯಕ್ರಮಕ್ಕೆ ಕೇವಲ ಮೂರು ನಾಲ್ಕು ಇಲಾಖೆಯ ಅಧಿಕಾರಿಗಳು ಮಾತ್ರ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಆದರೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಜವಾಬ್ದಾರಿ ಹೊತ್ತುಕೊಂಡಿರುವ ತಾಲೂಕು ಕಛೇರಿ ಅಧಿಕಾರಿಗಳು ಮಾತ್ರ ಜಯಂತಿಯಲ್ಲಿ ಭಾಗವಹಿಸಿಲ್ಲ. ಈ ಕುರಿತು ತಾಲೂಕು ದಂಡಾಧಿಕಾರಿಗಳನ್ನು ದೂರವಾಣಿ ಮೂಲಕ ಸಂರ್ಪಕಿಸಿದಾಗ ನಮ್ಮ ಇಲಾಖೆಯ ಅಧಿಕಾರಿಗಳು ಜಯಂತಿ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆಂದು ಹೇಳಿದರು. ಆದರೆ ಇಲ್ಲಿ ವೇದಿಕೆ ಕಾರ್ಯಕ್ರಮವನ್ನೂ ರೂಪಿಸಿಲ್ಲ ಎಂದ ಅವರು, ಸರ್ಕಾರಿ ಹಬ್ಬಗಳನ್ನು ಸರ್ಕಾರಿ ಅಧಿಕಾರಿಗಳೇ ಈ ರೀತಿ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ ನಿಯಮಗಳು ಅಧಿಕಾರಿಗಳಿಂದಲೇ ನಾಶವಗುತ್ತವೆಂಬ ಆತಂಕ ಹುಟ್ಟಿದೆ ಎಂದು ತಿಳಿಸಿದರು.

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

ಇಲಾಖೆ ವತಿಯಿಂದ ಜಯಂತಿ ಆಚರಣೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದೆವು. ಕರಪತ್ರಗಳನ್ನೂ ಹಂಚಿ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಗಿತ್ತು. ಆದರೆ ಮಂಗಳವಾರ ಶಿವರಾತ್ರಿ ಹಬ್ಬ ಇದುದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿರುವುದಿಲ್ಲ. ಇದಕ್ಕೆಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆಂದರೆ ಅದು ಅರ್ಥವಿಲ್ಲದ ಮಾತು ಎಂದು ಅಜೀತ್ ಕುಮಾರ್ ರೈ. ತಾಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.

ದಲಿತ ವಚನಕಾರರ ಜಯಂತಿಯಲ್ಲಿ ವಚನಕಾರರ ಬಾವ ಚಿತ್ರವಿಲ್ಲದೆ ಅಂಬೇಡ್ಕರ್ ಮತ್ತು ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು.

ಜಯಂತಿಯ ವೇದಿಕೆ ಕಾರ್ಯಕ್ರಮಕ್ಕೆ ಜನವಿಲ್ಲದೆ ಖಾಲಿಯಾಗಿ ಬಿದಿದ್ದರುವ ಖುರ್ಚಿಗಳು.

Get Latest updates on WhatsApp. Send ‘Subscribe’ to 8550851559