ದಲಿತ, ಮುಸ್ಲಿಂ ಜೋಡಿ ಪರಾರಿ, ಯುವಕನ ತಂದೆಯನ್ನು ಮರಕ್ಕೆ ಕಟ್ಟಿ ಥಳಿತ – News Mirchi

ದಲಿತ, ಮುಸ್ಲಿಂ ಜೋಡಿ ಪರಾರಿ, ಯುವಕನ ತಂದೆಯನ್ನು ಮರಕ್ಕೆ ಕಟ್ಟಿ ಥಳಿತ

ವಿಜಯಪುರ: ದಲಿತ ಯುವಕ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ಕೆಲವು ದಿನಗಳ ಹಿಂದೆ ಇಬ್ಬರೂ ಊರು ಬಿಟ್ಟು ಓಡಿಹೋಗಿದ್ದು, ಯುವಕನ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಹಾಳಗುಂಡಕನಾಳ ಗ್ರಾಮದ ನಿಂಗಪ್ಪ ಹರಿಜನ ಎಂಬ ಯುವಕ ಮತ್ತು ಮಾಶಾಬಿ ಎಂಬ ಮುಸ್ಲಿಂ ಯುವತಿಯ ನಡುವೆ ಪ್ರೇಮಾಂಕುರವಾಗಿತ್ತು. 20 ದಿನಗಳ ಹಿಂದೆ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದರು. ಇದಕ್ಕೆ ಸಹಾಯ ಮಾಡಿದನೆಂದು ಆರೋಪಿಸಿ ಯುವತಿಯ ಮನೆಯವರು ಯುವಕನ ತಂದೆ ಮತ್ತು ಆತನ ಇನ್ನೊಬ್ಬ ಮಗನನ್ನು ಮರಕ್ಕೆ ಕಟ್ಟಿ ಕ್ರೂರವಾಗಿ ಥಳಿಸಿದ ಘಟನೆ ಹಾಳಗುಂಕನಾಳ ಗ್ರಾಮದಲ್ಲಿ ನಡೆದಿದೆ.

ವಿಜಯಪುರದ ಯುವತಿಯ ಸಂಬಂಧಿಕರು 7 ಜನ ನಮ್ಮ ಊರಿಗೆ ಬಂದು ನಮ್ಮ ತಂದೆ ಮಾರಪ್ಪ ಹರಿಜನ ಅವರನ್ನು ಮರಕ್ಕೆ ಕಟ್ಟಿ ಥಳಿಸಿಲು ಆರಂಭಿಸಿದರು. ಇದನ್ನು ಕಂಡ ನನ್ನ ಮತ್ತೊಬ್ಬ ಸಹೋದರ ಆಕ್ಷೇಪಿಸಿದಾಗ ಅವನನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಮಾರಪ್ಪನ ಮತ್ತೊಬ್ಬ ಮಗ ಅಂಬರೀಶ ಆರೋಪಿಸಿದ್ದಾನೆ.

ಮೊದಲು ಪೊಲೀಸ್ ಗೆ ದೂರು ನೀಡಲು ಹಿಂದೇಟು ಹಾಕಿದ ಮಾರಪ್ಪನ ಕುಟುಂಬ, ನಂತರ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಮಾರಪ್ಪ, ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ವಿಜಯಪುರ ಎಸ್ಪಿ ಕುಲದೀಪ್ ಜೈನ್ ಹೇಳಿದ್ದಾರೆ. ಮೆಹಬೂಬ್ ಸಾಬ್ ಮುಜಾವರ್, ಅಮೀನ್ ಸಾಬ್ ಮುಜಾವರ್, ಶರೀಫ್ ಮುಜಾವರ್, ಬಾಬು ಮುಜಾವರ್, ರಫೀಕ್ ಮುಜಾವರ್, ಖಾದರ್ ಸಾಬ್ ಮುಜಾವರ್ ಮತ್ತು ಅಲ್ಲಾ ಬಕಾಶ್ ಮುಜಾವರ್ ಆರೋಪಿಗಳು.

Contact for any Electrical Works across Bengaluru

Loading...
error: Content is protected !!