20 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮೊದಲ ಹಿಂದೂ ಸಚಿವ |News Mirchi

20 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮೊದಲ ಹಿಂದೂ ಸಚಿವ

ಪಾಕಿಸ್ತಾನ ರಾಜಕಾರಣದಲ್ಲಿ 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹಿಂದೂ ರಾಜಕಾರಣಿಯೊಬ್ಬರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಈ ಹಿಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಲ್ಲಿನ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ನಂತರ ಮಧ್ಯಂತರ ಪ್ರಧಾನಿಯಾಗಿ ಷರೀಫ್ ಆಪ್ತ ಶಾಹಿದ್ ಖಕಾನ್ ಅಬ್ಬಾಸಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಅವರು ನೂತನ ಸಚಿವ ಸಂಪುಟ ರಚನೆ ಮಾಡಿದ್ದು, ಅದರಲ್ಲಿ 65 ವರ್ಷದ ದರ್ಶನ್ ಲಾಲ್ ಸ್ಥಾನ ಪಡೆದಿದ್ದಾರೆ.

ಆರಂಭದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸದ್ದ ದರ್ಶನ್ ಲಾಲ್, 2013 ರಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದಿಂದ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್ ಪಡೆದು ಎರಡನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 47 ನೂತನ ಸಚಿವರು ಪಾಕಿಸ್ತಾನ ಅಧ್ಯಕ್ಷರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಶುರು, ಇಂದೇ ಫಲಿತಾಂಶ

Loading...
loading...
error: Content is protected !!