ತಂದೆಯನ್ನು ನೋಡಿಕೊಳ್ಳಲಾರದೆ ಹತ್ಯೆ ಮಾಡಿದ ಮಗಳು

ತಿರುವೊತ್ತಿಯೂರು: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ನೋಡಿಕೊಳ್ಳಲಾರದೆ ಆತನನ್ನು ಹತ್ಯೆ ಮಾಡಿದ ಮಗಳು ಮತ್ತು ಅವರ ಮಿತ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಸೇಲಂ ಅರಸಿ ಪಾಳಯಂನಲ್ಲಿ ವಾಸಿಸುತ್ತಿರುವ ಕಮಲಾ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ತಂದೆ ಪಳನಿಸ್ವಾಮಿ(85) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಕಮಲಾ ಕೆಲಸ ಮಾಡುತ್ತಿದ್ದ ಮಿಲ್ ಬಳಿಗೆ ಹೋದ ತಂದೆ ಪಳನಿಸ್ವಾಮಿ, ತನ್ನ ಮಗಳು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಎಲ್ಲರೆದುರು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಅವಮಾನಕ್ಕೊಳಗಾದ ಕಮಲಾ, ಶನಿವಾರ ತನ್ನ ಸ್ನೆಹಿತ ಶಣ್ಮುಗನೊಂದಿಗೆ ಸೇರಿ ಪಳನಿ ಸ್ವಾಮಿ ಮೇಲೆ ಭಾರವಾದ ಮೂಟೆ ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಈ ಕುರಿತು ದೂರು ಸ್ವೀಕರಿಸದ ಪೊಲೀಸರು ಕಮಲಾ ಮತ್ತು ಶಣ್ಮುಗನನ್ನು ಬಂಧಿಸಿದ್ದಾರೆ.