ಪತ್ನಿ, ಮಗಳ ಮೇಲೆ ವಕೀಲನ ಹಲ್ಲೆ: ಚಿತ್ರೀಕರಿಸಿ ಪೊಲೀಸರಿಗೆ ನೀಡಿದ ಮತ್ತೊಬ್ಬ ಮಗಳು – News Mirchi
We are updating the website...

ಪತ್ನಿ, ಮಗಳ ಮೇಲೆ ವಕೀಲನ ಹಲ್ಲೆ: ಚಿತ್ರೀಕರಿಸಿ ಪೊಲೀಸರಿಗೆ ನೀಡಿದ ಮತ್ತೊಬ್ಬ ಮಗಳು

ದೆಹಲಿಯ ವಕೀಲನೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಕ್ರೂರವಾಗಿ ಹಲ್ಲೆ ಮಾಡಿದ ದೃಶ್ಯ ಸೆರೆಯಾಗಿದೆ. ಹೀಗೆ ಪತ್ನಿ ಮತ್ತು ಮಗಳ ಮೇಲೆ ವಕೀಲ ಹಲ್ಲೆ ನಡೆಸುವ ಸಮಯದಲ್ಲಿ ಮತ್ತೊಬ್ಬ ಮಗಳು ಇದನ್ನು ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾಳೆ.

ದಕ್ಷಿಣ ದೆಹಲಿಯ ವಸಂತ್ ಗಂಜ್ ನಿವಾಸಿಯಾದ ವಕೀಲ ಕಳೆದ 15 ವರ್ಷಗಳಿಂದ ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಹೆಣ್ಣು ಮಕ್ಕಳ ಮೇಲೂ ಕೈ ಮಾಡುತ್ತಿದ್ದ.

ಹೀಗಿದ್ದಾಗ ತನ್ನ ತಾಯಿ ಮತ್ತು ಸಹೋದರಿಯ ಮೇಲೆ ಅಪ್ಪನಾದವನು ಹಲ್ಲೆ ನಡೆಸುತ್ತಿರುವುದನ್ನು ವಕೀಲನ ಮತ್ತೊಬ್ಬ ಮಗಳು ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾಳೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!