ದಾವೂದ್ ಆಸ್ತಿ ಸ್ವಾಧೀನ: ಮೋದಿ ರಾಜತಾಂತ್ರಿಕತೆಗೆ ಸಿಕ್ಕ ಯಶಸ್ಸು? – News Mirchi

ದಾವೂದ್ ಆಸ್ತಿ ಸ್ವಾಧೀನ: ಮೋದಿ ರಾಜತಾಂತ್ರಿಕತೆಗೆ ಸಿಕ್ಕ ಯಶಸ್ಸು?

ಭಾರತದ ಮೊಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ನ 15,000 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವುದು ಓದಿದ್ದೀರಿ. ಇದು ಭಾರತ ಸರ್ಕಾರ ನೀಡಿದ್ದ ಮಾಹಿತಿ ಅಧಾರದ ಮೇಲೆ ಯುಎಇ ಸರದಕಾರ ಕೈಗೊ‍ಂಡ ಕ್ರಮ ಎಂದು ಬಿಜೆಪಿ ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಲಭಿಸಿದ ರಾಜತಾಂತ್ರಿಕ ಯಶಸ್ಸು ಎಂದೂ ಹೇಳಲಾಗುತ್ತಿದೆ.

ದಾವೂದ್ ಆಸ್ತಿಗಳ ಬಗ್ಗೆ ಭಾರತ ನೀಡಿದ ಮಾಹಿತಿಯನ್ನು ಆಧರಿಸಿ ಯುಎಇ ತನಿಖೆ ನಡೆಸಿತ್ತು. ಭಾರತ ನೀಡಿದ್ದ ಪಟ್ಟಿಯಲ್ಲಿ ಹಲವು ಹೋಟೆಲುಗಳು, ದಾವೂದ್ ಗೆ ಸೇರಿದ್ದ ಮತ್ತು ದಾವೂದ್ ಸಹೋದರ ಅನೀಸ್ ಇಬ್ರಾಹಿಂ ನಡೆಸುತ್ತಿದ್ದ ಗೋಲ್ಡನ್ ಬಾಕ್ಸ್ ಎಂಬ ದುಬೈ ಮೂಲದ ಕಂಪನಿಯೂ ಸೇರಿದೆ.

ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂದು ನಂಬಲಾಗುತ್ತಿರುವ ದಾವೂದ್ ಇಬ್ರಾಹಿಂ ನ ಚಟುವಟಿಕೆಗಳನ್ನು ಭಾರತ ಎರಡು ದಶಕಗಳಿಂದ ಗಮನಿಸುತ್ತಿದೆ. ಈ ಕುಖ್ಯಾತ ಭಯೋತ್ಪಾದಕ ಮುಂಬೈನಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

Loading...

Leave a Reply

Your email address will not be published.