ತ್ರಿಪುರ ಸಿಎಂ ಭಾಷಣ ಪ್ರಸಾರ ಮಾಡದ ದೂರದರ್ಶನ

ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯಾ ತಮ್ಮ ಸ್ವಾತಂತ್ರ್ಯ ದಿನಾಚರನೆಯ ಭಾಷಣವನ್ನು ಪ್ರಸಾರ ಮಾಡಲು ನಿರಾಕರಿಸಿವೆ ಎಂದು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ. ಭಾಷಣದಲ್ಲಿ ಬದಲಾವಣೆ ಮಾಡಿದರೆ ಮಾತ್ರ ಪ್ರಸಾರ ಮಾಡುತ್ತೇವೆ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆ ಎಂದು ಅವರು ಕಿಡಿ ಕಾರಿದ್ದಾರೆ.

ದೂರದರ್ಶನ, ಆಕಾಶವಾಣಿ ಆಗಸ್ಟ್ 12 ರಂದೇ ಸರ್ಕಾರ್ ಭಾಷಣವನ್ನು ರೆಕಾರ್ಡ್ ಮಾಡಿದ್ದವು. ಆದರೆ ಆ ಭಾಷಣದಲ್ಲಿ ಬದಲಾವಣೆ ಮಾಡಿದರೆ ಮಾತ್ರ ಪ್ರಸಾರ ಮಾಡುವುದಾಗಿ ಸೋಮವಾರ ಸಿಎಂ ಕಛೇರಿಗೆ ಪತ್ರ ಬಂದಿದೆ. “ಮುಖ್ಯಮಂತ್ರಿಗಳ ಭಾಷಣವನ್ನು ಅಧಿಕಾರಿಗಳು ಪರಿಶೀಲಿಸಿದರು. ಈಗಿರುವ ರೆಕಾರ್ಡ್ ಮಾಡಿರುವ ಭಾಷಣವನ್ನು ಪ್ರಸಾರ ಮಾಡಲಾರೆವು. ಸಂದರ್ಭಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ಬದಲಾವಣೆ ಮಾಡಿದರೆ ಉತ್ತಮ” ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೆ ತಮ್ಮ ಭಾಷಣದಲ್ಲಿನ ಒಂದು ಅಕ್ಷರವನ್ನೂ ಬದಲಿಸಲು ಸಿಎಂ ಅಂಗೀಕರಿಸಿಲ್ಲ ಎಂದು ಅವರ ಕಛೇರಿ ಮೂಲಗಳು ಹೇಳಿವೆ.