ಅಲ್ಲಾಹು ಅಕ್ಬರ್ ಎಂದು ಕಿರುಚುತ್ತಾ ಇಬ್ಬರ ಕತ್ತು ಕುಯ್ದ – News Mirchi

ಅಲ್ಲಾಹು ಅಕ್ಬರ್ ಎಂದು ಕಿರುಚುತ್ತಾ ಇಬ್ಬರ ಕತ್ತು ಕುಯ್ದ

ಭಾನುವಾರ ಫ್ರಾನ್ಸ್ ನ ಮರ್ಸಿಲ್ಲೆ ನಗರದ ಸೇಂಟ್ ಚಾರ್ಲ್ಸ್ ರೈಲ್ವೆ ನಿಲ್ದಾಣದಲ್ಲಿ ದುಷ್ಕರ್ಮಿಯೊಬ್ಬ ‘ಅಲ್ಲಾಹು ಅಕ್ಬರ್’ ಎಂದು ಕಿರುಚುತ್ತಾ ಇಬ್ಬರು ಮಹಿಳೆಯರನ್ನು ಚೂರಿಯಿಂದ ಇರಿದು ಕೊಂದಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಸ್ಥಳದಲ್ಲಿಯೇ ಗುಂಡಿಟ್ಟು ಕೊಂದಿದ್ದಾರೆ. ಭಾನುವಾರ ನಡೆದ ಈ ಘಟನೆಯನ್ನು ಪೊಲೀಸರು ಉಗ್ರರ ಕೃತ್ಯ ಎಂದು ಅನುಮಾನಿಸುತ್ತಿದ್ದಾರೆ. ಮತ್ತೊಂದೆಡೆ ಇದು ತಮ್ಮವರದೇ ಕೆಲಸ ಎಂದು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಪ್ರಕಟಿಸಿದೆ.

17 ಮತ್ತು 20 ವಯಸ್ಸಿನ ಇಬ್ಬರು ಮಹಿಳೆಯರು ಹತ್ಯೆಗೊಳಗಾದವರು. ಕಪ್ಪು ಬಟ್ಟೆ ಧರಿಸಿದ ದುಷ್ಕರ್ಮಿ ಒಬ್ಬ ಯುವತಿಯನ್ನು ಕತ್ತು ಕುಯ್ದು ಕೊಂದಿದ್ದು, ಮತ್ತೊಬ್ಬ ಯುವತಿಯ ಎದೆಯ ಮೇಲೆ ಮತ್ತು ಹೊಟ್ಟೆಗೆ ಚೂರಿಯಿಂದ ಇರಿದಿದ್ದು, ಆಕೆ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದಾಳಿ ನಡೆಸಿದ ವ್ಯಕ್ತಿಯ ವಯಸ್ಸು 25 ರಿಂದ 30 ಇರಬಹುದು, ಆತನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿರಬಹುದು ಎಂದು ತನಿಖಾಧಿಕಾರಿಗಳು ಭಾವಿಸುತ್ತಿದ್ದಾರೆ. [ಇದನ್ನೂ ಓದಿ: ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾಗೆ ನಿಷೇಧ ವಿಧಿಸಿದ ಆಸ್ಟ್ರಿಯಾ]

Get Latest updates on WhatsApp. Send ‘Add Me’ to 8550851559

Loading...