ಜಲಾಂತರ್ಗಾಮಿಯಲ್ಲಿ ಸಂದರ್ಶನ ನಡೆಸಲು ತೆರಳಿದ್ದ ಪತ್ರಕರ್ತೆಯ ತಲೆ, ಕಾಲು ಪತ್ತೆ – News Mirchi

ಜಲಾಂತರ್ಗಾಮಿಯಲ್ಲಿ ಸಂದರ್ಶನ ನಡೆಸಲು ತೆರಳಿದ್ದ ಪತ್ರಕರ್ತೆಯ ತಲೆ, ಕಾಲು ಪತ್ತೆ

ಕೋಪೆನ್ ಹೇಗನ್: ಸ್ವಂತದ್ದೊಂದು ಜಲಂತರ್ಗಾಮಿ ನಿರ್ಮಿಸಿದ ವ್ಯಕ್ತಿಯನ್ನು ಅದೇ ಜಲಾಂತರ್ಗಾಮಿಯಲ್ಲಿ ಸಂದರ್ಶನ ನಡೆಸಲು ತೆರಳಿ ನಾಪತ್ತೆಯಾಗಿದ್ದ ಸ್ವೀಡಿಶ್ ಪತ್ರಕರ್ತೆಯ ಕತ್ತರಿಸಲ್ಪಟ್ಟ ರುಂಡ ಮತ್ತು ಕಾಲುಗಳು ಸಮುದ್ರದಲ್ಲಿ ಪತ್ತೆಯಾಗಿವೆ. ಶುಕ್ರವಾರವಷ್ಟೇ ಆಕೆಯ ನಗ್ನ ಸ್ಥಿತಿಯಲ್ಲಿದ್ದ ಮುಂಡ ಪತ್ತೆಯಾಗಿತ್ತು.

ಫ್ರೀಲ್ಯಾನ್ಸ್ ಪತ್ರಕರ್ತೆಯಾಗಿರುವ ಕಿಮ್ ವಾಲ್ ಎಂಬಾಕೆ ಆಗಸ್ಟ್ 10 ರಂದು ಜಲಾಂತರ್ಗಾಮಿ ನಿರ್ಮಿಸಿದ್ದ ಪೀಟರ್ ಮಾಡ್ಸನ್ ನ ಸಂದರ್ಶನ ನಡೆಸಲು ತೆರಳಿದ್ದಳು. ಆದರೆ ಅಂದಿನಿಂದ ಆಕೆಯ ಸುಳಿವೇ ಇರಲಿಲ್ಲ. ಪೊಲೀಸ್ ಅಧಿಕಾರಿಗಳು ಹೇಳುವಂತೆ, ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ ಪತ್ರಕರ್ತೆಯ ತಲೆ, ಕಾಲುಗಳು, ಆಕೆಯ ಬಟ್ಟೆ ಮತ್ತು ಚೂರಿಯೊಂದು ಪತ್ತೆಯಾಗಿದೆ. ಅದರ ಜೊತೆಗೆ ಅದು ನೀರಿನ್ಲಲಿ ಮುಳುಗುವಂತೆ ಮಾಡಲು ಅದರಲ್ಲಿ ಕಬ್ಬಿಣದ ತುಣುಕುಗಳನ್ನು ಇರಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಯಾವುದೇ ಗಾಯಗಳಾದಂತೆ ಕಂಡುಬಂದಿಲ್ಲ.

[ಇದನ್ನೂ ಓದಿ: ಮಿಸ್ಟರ್ ದಲಿತ್ ಚಳುವಳಿಯ ಹಿಂದಿನ ಅಸಲಿ ಬಣ್ಣ ಬಯಲು!}

ಪತ್ರಕರ್ತೆಯನ್ನು ಸಂದರ್ಶನದ ನಂತರ ಸುರಕ್ಷಿತವಾಗಿ ಕೋಪೆನ್ ಹೇಗನ್ ನಲ್ಲಿ ಬಿಟ್ಟಿದ್ದೆ ಎಂದು ಹೇಳಿದ್ದ ಪೀಟರ್ ಮ್ಯಾಡ್ಸೆನ್, ನಂತರ ಆಕೆಯ ತಲೆಗೆ ಆಕಸ್ಮಿಕವಾಗಿ ಜಲಾಂತರ್ಗಾಮಿಯಲ್ಲಿ ಪೆಟ್ಟಾಗಿ ಸಾವನ್ನಪ್ಪಿದಳು, ಹೀಗಾಗಿ ಆಕೆಯನ್ನು ಸಮುದ್ರದಲ್ಲಿ ಹೂತಿದ್ದಾಗಿ ಮಾತು ಬದಲಿಸಿದ್ದ. ಆದರೆ ಆಕೆಯ ದೇಹದ ಮೇಲೆ 15 ಗಾಯದ ಗುರುತುಗಳಿವೆ ಎಂಬುದು ತಿಳಿದು ಬಂದಿದೆ.

Get Latest updates on WhatsApp. Send ‘Add Me’ to 8550851559

Loading...