15,935 ಕೋಟಿ ರೂಪಾಯಿ ವೆಚ್ಚದ ರೈಫಲ್, ಮಷೀನ್ ಗನ್ ಖರೀದಿಗೆ ಅನುಮೋದನೆ

ನವದೆಹಲಿ: 15,935 ಕೋಟಿ ರೂಪಾಯಿ ಅಂದಾಜು ವೆಚ್ಚದ ಅಸಾಲ್ಟ್ ರೈಫಲ್, ಕಾರ್ಬೈನ್ ಗಳು ಹಾಗೂ ಹಗುರ ಮಷೀನ್ ಗನ್ ಗಳ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಾಮಗ್ರಿ ಖರೀದಿ ಸಮಿತಿಯು ಮಂಗಳವಾರ ಅನುಮೋದನೆ ನೀಡಿದೆ.

ಭಾರತೀಯ ಸೇನೆ, ವಾಯುಸೇನೆ ಮತ್ತು ನೌಕಾಪಡೆ ಮೂರಕ್ಕೂ ಸೇರಿ ಅಂದಾಜು 12,280 ಕೋಟಿ ರೂಪಾಯಿ ವೆಚ್ಚದಲ್ಲಿ 7.4 ಲಕ್ಷ ಅಸಾಲ್ಟ್ ರೈಫಲ್ ಗಳ ಖರೀದಿಯೂ ಈ ಪ್ರಸ್ತಾವನೆಯಲ್ಲಿ ಸೇರಿದೆ. ವಾಯುಪಡೆ ಮತ್ತು ಸೇನೆಗಾಗಿ ರೂ.982 ಕೋಟಿ ವೆಚ್ಚದಲ್ಲಿ 5,719 ಸ್ನೈಪರ್ ರೈಫಲ್ ಗಳ ಖರೀದಿಗೆ ಸಮಿತಿ ಅನುಮೋದನೆ ನೀಡಿದೆ.

ನಿಮ್ಮ ಯೋಜನೆಗೆ ನಮ್ಮ ಹಣ ಕೇಳಬೇಡಿ ಎಂದ ಮಮತಾ ಬ್ಯಾನರ್ಜಿ

ಭಾರತದಲ್ಲಿ ತಯಾರಿಸಿದ ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲಾಗುತ್ತದೆ ಮತ್ತು ಸ್ನೈಪರ್ ರೈಫಲ್ ಗಳನ್ನು ವಿದೇಶಗಳಿಂದ ಖರೀದಿಸಲಾಗುತ್ತದೆ. ಆದರೆ ಅದರ ಮದ್ದುಗುಂಡುಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಎಂದು ಸರ್ಕಾರ ಪ್ರಕಟನೆಯಲ್ಲಿ ಹೇಳಿದೆ.

Get Latest updates on WhatsApp. Send ‘Subscribe’ to 8550851559