ದೆಹಲಿ ಕೇವಲ ಅಲ್ಲಿನ ನಿವಾಸಿಗಳದ್ದಲ್ಲ, ಇಡೀ ದೇಶದ ನಾಗರಿಕರಿಗೆ ಸೇರಿದ್ದು: ಸುಪ್ರೀಂಗೆ ಕೇಂದ್ರ |News Mirchi

ದೆಹಲಿ ಕೇವಲ ಅಲ್ಲಿನ ನಿವಾಸಿಗಳದ್ದಲ್ಲ, ಇಡೀ ದೇಶದ ನಾಗರಿಕರಿಗೆ ಸೇರಿದ್ದು: ಸುಪ್ರೀಂಗೆ ಕೇಂದ್ರ

ನವದೆಹಲಿ: ದೇಶದ ರಾಜಧಾನಿ ದೆಹಲಿಯು ಕೇವಲ ದೆಹಲಿಯಲ್ಲಿ ವಾಸಿಸುತ್ತಿರುವವರಿಗೆ ಮಾತ್ರವಲ್ಲ, ಇಡೀ ದೇಶದ ನಾಗರಿಕರಿಗೆ ಸೇರಿದ್ದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಹೇಳಿದೆ. ರಾಜಧಾನಿ ಮೇಲಿನ ತನ್ನ ಅಧಿಕಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ದೆಹಲಿ ಸರ್ಕಾರಕ್ಕೂ ರಾಜಧಾನಿ ಮೇಲೆ ಕೇಂದ್ರದಷ್ಟೇ ಅಧಿಕಾರವಿದೆ ಎಂದು ಹೇಳುವುದು ಸರಿಯಲ್ಲ ಎಂದು ವಾದಿಸಿತು.

ದೆಹಲಿಗೆ ಲೆಫ್ಟಿನೆಂಟ್ ಗವರ್ನರ್ ಅವರೇ ಆಡಳಿತಾಧಿಕಾರಿ ಹೊರತು ಮುಖ್ಯಮಂತ್ರಿಯಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಅದರೆ ಈ ತೀರ್ಪನ್ನು ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಈ ವಿಷಯದ ಕುರಿತು ವಿಚಾರಣೆಯನ್ನು ಪ್ರಧಾನ ನ್ಯಾಯಮೂರ್ತಿ ಜಸ್ಟೀಸ್ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ನ್ಯಾಯಪೀಠ ಕೈಗೆತ್ತಿಕೊಂಡಿದೆ.

ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ವಾದಿಸಿ, ದೇಶದ ರಾಜಧಾನಿ ದೇಶದ ಪ್ರಜೆಗಳೆಲ್ಲರಿಗೂ ಸೇರುತ್ತದೆ. ಆಪ್ ಮಾತ್ರ ಜನರು ಆಯ್ಕೆ ಮಾಡಿದ ಸರ್ಕಾರಕ್ಕೆ ಸೇರುತ್ತದೆ ಎನ್ನುತ್ತಿದ್ದಾರೆ. ಮತ್ತೆ ಕೇಂದ್ರವೂ ಜನರಿಂದ ಆಯ್ಕೆಯಾದ ಸರ್ಕಾರವೇ ಅಲ್ಲವೆ. ದೆಹಲಿ ಸಂಪೂರ್ಣ ರಾಜ್ಯವಲ್ಲ. ಅದು ಒಂದು ಕೇಂದ್ರಾಡಳಿತ ಪ್ರದೇಶ ಮಾತ್ರ. ಆ ಪ್ರದೇಶದ ಆಡಳಿತದ ಮೇಲೆ ದೆಹಲಿ ಸರ್ಕಾರಕ್ಕಿಂತಲೂ ಹೆಚ್ಚಿನ ಅಧಿಕಾರಿ ಕೇಂದ್ರ ಸರ್ಕಾರಕ್ಕಿದೆ. ಕೇಂದ್ರದೊಂದಿಗೆ ಅಲ್ಲಿನ ವಿಧಾನಸಭೆಗೂ ಸಮಾನ ಅಧಿಕಾರವಿದೆ ಎನ್ನುವುದು ಸರಿಯಲ್ಲ. ಹೀಗಾದರೆ ಜನವರಿ 26 ರಂದು ದೆಹಲಿಯಲ್ಲಿ ಕವಾಯತು ನಡೆಯಬೇಕಾ ಬೇಡವೇ ಎಂಬುದನ್ನೂ ಕೂಡಾ ಅವರೇ ತೀರ್ಮಾನಿಸುತ್ತಾರೇನೋ ಎಂದು ಹೇಳಿದರು.

ಇದನ್ನೂ ಓದಿ: ನ್ಯಾಯಾಧೀಶರ ವೇತನ ಹೆಚ್ಚಳ ಪ್ರಸ್ತಾವನೆಗೆ ಅನುಮೋದನೆ

ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಗೆ ವಿಶೇಷ ಸ್ಥಾನಮಾನವಿದೆ, ಆದರೆ ಅದಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನವಿಲ್ಲ. ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಅಸ್ತಿತ್ವದಲ್ಲಿದ್ದರೂ ಅದು ಸಂವಿಧಾನದ ಪ್ರಕಾರ ಸಂಪೂರ್ಣ ರಾಜ್ಯಗಳಡಿಯಲ್ಲಿ ಬರುವುದಿಲ್ಲ ಎಂದು ಕೇಂದ್ರ ಪರ ವಕೀಲರು ವಾದಿಸಿದರು. ವಿಚಾರಣೆ ಗುರುವಾರವೂ ಮುಂದುವರೆಯಲಿದೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!