Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ದೆಹಲಿ ಉಪಮುಖ್ಯಮಂತ್ರಿ ಕಛೇರಿಗೇ ಕನ್ನ – News Mirchi

ದೆಹಲಿ ಉಪಮುಖ್ಯಮಂತ್ರಿ ಕಛೇರಿಗೇ ಕನ್ನ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಛೇರಿಯಲ್ಲಿ ಕಳ್ಳತನವಾಗಿದೆ. ಅವರ ಕಛೇರಿಗೆ ಅಪರಿಚಿತರು ನುಗ್ಗಿ ಎರಡು ಕಂಪ್ಯೂಟರ್ ಗಳು, ಹಾಗೂ ಕೆಲವು ಪ್ರಮುಖ ದಾಖಲೆಗಳನ್ನೂ ಹೊತ್ತೊಯ್ದಿದ್ದಾರೆ. ಅಷ್ಟೇ ಅಲ್ಲದೆ ಹೋಗುತ್ತಾ ಕಛೇರಿಯನ್ನು ಧ್ವಂಸಗೊಳಿಸಿದ್ದಾರೆ.

ಪತ್ಪರ್ ಗಂಜ್ ನ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಛೇರಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳತನವಾದ ಸಮಯ ಮಾತ್ರ ಖಚಿತವಾಗಿ ತಿಳಿದುಬಂದಿಲ್ಲ. ಬೀಗ ತೆಗೆದು ಕಛೇರಿ ಪ್ರವೇಶಿಸುವ ಮುನ್ನವೇ ಸಿಸಿಟಿವಿ ಆಫ್ ಮಾಡಿದ ಕಳ್ಳರು, ತಾವು ಹೊರ ಹೋಗುವ ಸಮಯದಲ್ಲೂ ಆ ಕ್ಯಾಮೆರಾ, ಅದರಲ್ಲಿ ದಾಖಲಾದ ದೃಶ್ಯಾವಳಿಗಳನ್ನು, ಸಿಪಿಯು ಮತ್ತಿತರ ಬೆಲೆಬಾಳವು ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಫೋರೆನ್ಸಿಕ್ ತಂಡ ಈಗಾಗಲೇ ಸಾಕ್ಷಿಗಳನ್ನು ಸಂಗ್ರಹಿಸಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!