ಅಪಘಾತವಾದಾಗ ಆಸ್ಪತ್ರೆಗೆ ಸಾಗಿಸಿದರೆ 2,000 :ದೆಹಲಿ ಸರ್ಕಾರ

***

ರಸ್ತೆಯಲ್ಲಿ ಯಾವುದಾದರೂ ಕಾರು ಅಥವಾ ಬೈಕ್ ಅಪಘಾತ ನಡೆದು, ಅಪಘಾತಕ್ಕೀಡಾದ ವ್ಯಕ್ತಿ ರಸ್ತೆಯಲ್ಲಿ ನರಳುತ್ತಾ ಬಿದ್ದಿದ್ದರೆ, ಸಹಾಯ ಮಾಡಬೇಕಾ, ಮಾಡಿದರೆ ಕಾನೂನು ಪ್ರಕ್ರಿಯೆಗಳಿಗಾಗಿ ಅಲೆಯಬೇಕಾ? ಎಂಬ ಗೊಂದಲದಲ್ಲಿ ಮೂಕ ಪ್ರೇಕ್ಷಕರಾಗುವವರೇ ಹೆಚ್ಚು. ಆದರೆ ಇಂತಹ ಹಿಂಜರಿಕೆಗಳಿಗೆ ಇತಿಶ್ರೀ ಹಾಡಲು ದೆಹಲಿ ಸರ್ಕಾರ ಮುಂದಾಗಿದೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದವರಿಗೆ ರೂ.2,000 ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಈ ಯೊಜನೆಯು ಅಪಘಾತಕ್ಕೆ ಈಡಾದವರನ್ನು ಆಸ್ಪತ್ರೆಗೆ ದಾಖಲಿಸುವವರನ್ನು ಪ್ರೋತ್ಸಾಹಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ. 2,000 ರೂಪಾಯಿಯ ಜೊತೆಗೆ ಸರ್ಕಾರದಿಂದ ಪ್ರಶಂಸಾಪತ್ರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.