ರಾಹುಲ್ ವಿರುದ್ಧ ದಾಖಲಾಗಿದ್ದ ಪಿಟೀಷನ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್ |News Mirchi

ರಾಹುಲ್ ವಿರುದ್ಧ ದಾಖಲಾಗಿದ್ದ ಪಿಟೀಷನ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ, ನ.22: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಪಿಟೀಷನ್ ಅನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ರಾಹುಲ್ ಎಸ್.ಪಿ.ಜಿ ಭದ್ರತೆಯನ್ನು ಕಡೆಗಣಿಸಿ, ಅಪಾಯ ತಂದೊಡ್ಡುಕೊಳ್ಳುತ್ತಿದ್ದಾರೆ ಎಂಬ ಆರೋಪಿಸಿ ದಾಖಲಾಗಿದ್ದ ಪಿಟೀಷನ್ ಇದಾಗಿತ್ತು.

ಈ ಪಿಟೀಷನ್ ವಿಚಾರಣೆಗೆ ಅರ್ಹವಲ್ಲ, ಭದ್ರತಾ ವಿಷಯಗಳ ಕುರಿತು ತೀರ್ಮಾನ ಕೈಗೊಳ್ಳಲು ನ್ಯಾಯಾಲಯ ಸೂಕ್ತ ವೇದಿಕೆಯಲ್ಲ ಎಂದು ತಾತ್ಕಾಲಿಕ ನ್ಯಾಯಮೂರ್ತಿ ಜಸ್ಟೀಸ್ ಗೀತಾ ಮಿತ್ತಲ್, ಜಸ್ಟೀಸ್ ಹರಿಶಂಕರ್ ಅವರ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭದ್ರತೆ ಕುರಿತು ತೀರ್ಮಾನ ಕೈಗೊಳ್ಳಲು, ಭದ್ರತೆಗೆ ಸಂಬಂಧಿಸಿ ನಾವೇ ಸರ್ಕಾರವನ್ನು ಅವಲಂಬಿಸುತ್ತೇವೆ, ಸರ್ಕಾರದ ನೀಡುವ ಮೌಲ್ಯಮಾಪನದ ಮೇಲೆಯೇ ನಾವು ಮುಂದುವರೆಯಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮತ್ತೊಂದು ಕಡೆ ರಾಹುಲ್ ಭದ್ರತೆ ಕುರಿತು ಸರ್ಕಾರವೂ ಆತಂಕ ವ್ಯಕ್ತಪಡಿಸುತ್ತಿದೆ ಎಂದು, ಎಸ್.ಪಿ.ಜಿ ಭದ್ರತೆಯನ್ನು ನಿರ್ಲಕ್ಷಿಸುವುದು ಜವಾಬ್ದಾರಿಯುತ ವ್ಯಕ್ತಿಯ ನಡುವಳಿಕೆಯಲ್ಲವೆಂದು ಕೇಂದ್ರ ಸರ್ಕಾರದ ಸ್ಟ್ಯಾಂಡಿಂಗ್ ಕೌನ್ಸಿಲ್ ಅನಿಲ್ ಸೋನಿ ನ್ಯಾಯಾಯಲಕ್ಕೆ ತಿಳಿಸಿದರು. ರಾಹುಲ್ ಗೆ ಏನಾದರೂ ಸಂಭವಿಸಿದರೆ ಅದಕ್ಕೆ ನಾವು(ಸರ್ಕಾರ) ಜವಾಬ್ದಾರಿ ವಹಿಸಬೇಕಾಗಿರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ವಿಶೇಷ ಭದ್ರತೆ ವ್ಯವಸ್ಥೆ ಕಾಯ್ದೆಯನ್ನು ಉಲ್ಲಂಘಿಸದಂತೆ ಕೇಂದ್ರ ನೋಡಿಕೊಳ್ಳಬೇಕು ಎಂದು ಆದೇಶಿಸಬೇಕೆಂದು ಕೋರಿ ಮುಂಬೈ ಬಿಜೆಪಿ ವಕ್ತಾರ ತುಹಿನ್ ಎ ಸಿನ್ಹಾ ಈ ಪಿಟೀಷನ್ ದಾಖಲಿಸಿದ್ದರು. ಎಸ್.ಪಿ.ಜಿ ಭದ್ರತೆ ಇಲ್ಲದೆ ಪ್ರವಾಸ ಮಾಡುವುದಿಲ್ಲ ಎಂದು ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ ಗೆ ಸೂಚಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!