ದೆಹಲಿಯ ನೂತನ ಲೆ. ಗವರ್ನರ್ ಯಾರು?

ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೆಹಲಿ ಸರ್ಕಾರ ಮತ್ತು ಗವರ್ನರ್ ನಡುವಿನ ಸಂಬಂಧ ಆರಂಭದಿಂದಲೂ ಹಾವು ಮುಂಗುಸಿಯಂತೆ ಎನ್ನುವುದು ಎಲ್ಲರಿಗೂ ಗೊತ್ತಿರುವುದು.

ಇದೀಗ ಜಂಗ್ ರಾಜೀನಾಮೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಜಂಗ್ ರವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ನಜೀಬ್ ಜಂಗ್ ರಾಜೀನಾಮೆ ಹಿಂದೆ ಯಾವುದಾದರೂ ಒತ್ತಡವಿತ್ತೇ ಎಂದು ತಿಳಿಯಬೇಕು ಎಂದು ಹೇಳಿದ್ದಾರೆ.

ಇನ್ನು ಜಂಗ್ ರಾಜೀನಾಮೆಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಬಿಜೆಪಿ ನಡುವೆ ಡೀಲ್ ನಡೆದಿರಬಹುದು ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಜಂಗ್ ರಾಜೀನಾಮೆ ಹಿಂದಿನ ಅಸಲಿ ಸತ್ಯ ಹೊರಬರಬೇಕು ಎಂದು ಕಾಂಗ್ರೆಸ್ ಹೇಳಿದೆ.

ಇದೆಲ್ಲದರ ನಡುವೆ ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ದೆಹಲಿ ಪೊಲೀಸ್ ಕಮೀಷನರ್ ಬಿ.ಎಸ್.ಬಸ್ಸಿ, ಅಂಡಮಾನ್ ನಿಕೋಬಾರ್ ಲೆ. ಗವರ್ನರ್ ಜಗದೀಶ್ ಮುಖಿ ಮತ್ತು ಪುದುಚೇರ ಲೆ. ಗವರ್ನರ್ ಕಿರಣ್ ಬೇಡಿ ಹೆಸರುಗಳು ಕೇಳಿ ಬರುತ್ತಿವೆ.

Loading...

Leave a Reply

Your email address will not be published.

error: Content is protected !!