ಗವರ್ನರ್ ಹುದ್ದೆಗೆ ನಜೀಬ್ ಜಂಗ್ ರಾಜೀನಾಮೆ |News Mirchi

ಗವರ್ನರ್ ಹುದ್ದೆಗೆ ನಜೀಬ್ ಜಂಗ್ ರಾಜೀನಾಮೆ

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನಜೀಬ್ ಜಂಗ್ ಗುರುವಾರ ರಾಜೀನಾಮೆ ಮಾಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. 2013 ರಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ನಜೀಬ್ ಜಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು.

ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಕೆಲ ಕಾಲದಿಂದ ಮುಸುಕಿನ ಗುದ್ದಾಟವಿದ್ದದ್ದು ನಮಗೆಲ್ಲಾ ತಿಳಿದದ್ದೇ. ಇದೀಗ ನಜೀಬ್ ಜಂಗ್ ತಮ್ಮ ಅಧಿಕಾರಾವಧಿ ಮುಗಿಯಲು ಇನ್ನೂ 18 ತಿಂಗಳುಗಳು ಇರುವಂತೆಯೇ ರಾಜೀನಾಮೆ ನೀಡಿದ್ದಾರೆ.

ತಮಗೆ ಸಹಕರಿಸಿದ ಕೇಜ್ರಿವಾಲ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇನ್ನು ರಾಜೀನಾಮೆ ನಂತರ ನಜೀಬ್ ಜಂಗ್ ತಮಗಿಷ್ಟವಾದ ಅಧ್ಯಾಪಕ ವೃತ್ತಿಗೆ ವಾಪಸಾಗುತ್ತಾರೆ ಎಂದು ಅವರ ಕಛೇರಿ ಮೂಲಗಳು ಹೇಳಿವೆ.

ಮತ್ತೊಂದು ಕಡೆ ಹಠಾತ್ತಾಗಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ಕುರಿತು ಯಾವುದೇ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಇನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ನಜೀಬ್ ಜಂಗ್ ರ ನಡುವೆ ಆರಂಭದಿಂದಲೂ ಉತ್ತಮ ಸಂಬಂಧಗಳಿಲ್ಲ ಎನ್ನುವುದು ಗೊತ್ತಿರುವ ವಿಷಯವೇ.

Loading...
loading...
error: Content is protected !!