ಈ ವ್ಯಕ್ತಿ ನಾಯಿ ಮರಿ ಕಾಲು ಕತ್ತರಿಸಲು ಕಾರಣ!! – News Mirchi
We are updating the website...

ಈ ವ್ಯಕ್ತಿ ನಾಯಿ ಮರಿ ಕಾಲು ಕತ್ತರಿಸಲು ಕಾರಣ!!

ನಾಯಿಗಳು ಮನುಷ್ಯರ ಉತ್ತಮ ಸ್ನೇಹಿತರು ಎನ್ನುತ್ತಾರೆ. ಆದರೆ ದೆಹಲಿಯ ಈ ವ್ಯಕ್ತಿ ಈ ಮಾತನ್ನು ಸುಳ್ಳು ಮಾಡಿದ್ದಾನೆ. ನಾಯಿ ಮರಿಯ ಕಾಲುಗಳನ್ನು ಕತ್ತರಿಸುವ ಮೂಲಕ ತನ್ನ ಕರಾಳ ಮುಖ ಪ್ರದರ್ಶಿಸಿದ್ದಾನೆ.

ಇಷ್ಟಕ್ಕೂ ಆಗಿದ್ದೇನು..?

ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ನಾಯಿ ಮರಿಯೊಂದಕ್ಕೆ ದೆಹಲಿಯ ಪ್ರಮೋದ್ ಎಂಬ ವ್ಯಕ್ತಿ ತಿಂಡಿ ನೀಡಲು ಮುಂದಾಗಿದ್ದಾನೆ. ತಿಂಡಿ ನೋಡಿದ ಖುಷಿಯಲ್ಲಿ ಆ ವ್ಯಕ್ತಿಗೆ ನಾಯಿಮರಿ ತನ್ನ ಉಗುರುಗಳಿಂದ ಗೀಚಿದೆ.

ಇಷ್ಟಕ್ಕೇ ಕೋಪಗೊಂಡ ವ್ಯಕ್ತಿ ಮನೆಯೊಳಗಿನಿಂದ ಚಾಕು ತಂದು ನಾಯಿ ಮರಿಯ ಮುಂದಿನ ಹಾಗೂ ಹಿಂದಿನ ಒಂದೊಂದು ಕಾಲುಗಳನ್ನು ಕತ್ತರಿಸಿದ್ದಾನೆ. ಈ ಕೃತ್ಯವನ್ನು ಎಸಗಿದ ವ್ಯಕ್ತಿಯನ್ನು ಪ್ರಮೋದ್ ಎಂದು ಗುರುತಿಸಲಾಗಿದೆ.

ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!