boy-murder

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

7 ವರ್ಷದ ಬಾಲಕನನ್ನು ಕೊಂದು ಸುಮಾರು ಒಂದು ತಿಂಗಳ ಕಾಲ ಸೂಟ್ ಕೇಸ್ ನಲ್ಲಿಟ್ಟಿದ್ದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಬಾಲಕನ್ನು ಕೊಂದವನು ಐಎಎಸ್ ಆಕಾಂಕ್ಷಿಯಾಗಿದ್ದು, ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದವನು.

ಅವದೇಶ್ ಸಖ್ಯ ಎಂಬ ಪಾಪಿಯೇ ಬಾಲಕನನ್ನು ಕೊಂದು ಸೂಟ್ ಕೇಸ್ ನಲ್ಲಿ ಬಚ್ಚಿಟ್ಟಿದ್ದವನು. ಈತ ಉತ್ತರ ದೆಹಲಿ ಸ್ವರೂಪ್ ನಗರದಲ್ಲಿ ಈ ಹಿಂದೆ ಬಾಡಿಗೆಗಿದ್ದ ಮನೆಯ ಮಾಲೀಕನ ಮಗನನ್ನೇ ಕೊಲೆ ಮಾಡಿದ್ದು, ಬಾಲಕನಿಗೆ ಸೈಕಲ್ ಕೊಡಿಸುವ ಆಮಿಷವೊಡ್ಡಿ ಅಪಹರಿಸಿದ್ದ. ಜನವರಿ 7 ರಂದು ಬಾಲಕನನ್ನು ಸೈಕಲ್ ಕೊಡಿಸುವ ಆಮಿಷವೊಡ್ಡಿ ಅವದೇಶ್ ಅಪಹರಿಸಿದ್ದ. ಕೊಳೆತ ಬಾಲಕನ ಮೃತದೇಹವನ್ನು ನೋಡಿದರೆ ಅಪಹರಣ ಮಾಡಿದ ಕೂಡಲೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಲಕನ ಮನೆಯಲ್ಲಿ ಬಾಡಿಗೆಗಿದ್ದ ಅವದೇಶ, ಕಾರಣಾಂತರಗಳಿಂದ ಮನೆಯನ್ನು ಖಾಲಿ ಮಾಡಿ ಹತ್ತಿರದಲ್ಲೇ ಮತ್ತೊಂದು ಮನೆಯಲ್ಲಿ ವಾಸವಿದ್ದ. ಆದರೂ ಪರಿಚಿತನಾದ್ದರಿಂದ ಆಗಾಗ ಹಳೆ ಮನೆ ಮಾಲೀಕನ ಮನೆಗೆ ಹೋಗಿ ಬರುತ್ತಿದ್ದ. ಇತ್ತ ಬಾಲಕ ನಾಪತ್ತೆಯಾದ ನಂತರವೂ ನಾಪತ್ತೆ ದೂರು ದಾಖಲಿಸಲು ಬಾಲಕನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ಹೋಗಿದ್ದ.

ಪಾಕಿಸ್ತಾನದೊಂದಿಗೆ ಮಾತುಕತೆ ಬಿಟ್ಟು ಬೇರೆ ಮಾರ್ಗವಿಲ್ಲ: ಮೆಹಬೂಬಾ ಮುಫ್ತಿ

boy-murder-delhi3

ಇತ್ತ ಬಾಲಕನ ಕೊಲೆ ಮಾಡಿದ ನಂತರವೂ ಬಾಲಕನನ್ನು ಹುಡುಕುವವನಂತೆ ನಟಿಸುತ್ತಿದ್ದ ಅವದೇಶ್ ಮನೆಯಿಂದ ಕೆಟ್ಟ ವಾಸನೆ ಬರಲು ಶುರುವಾಗಿತ್ತು. ನೆರೆಹೊರೆಯವರು ಕೇಳಿದಾಗ ಸತ್ತ ಇಲಿಗಳನ್ನು ತೋರಿಸಿ ಯಾಮಾರಿಸಿದ್ದ. ಆದರೆ ಈ ಕುರಿತು ಪೊಲೀಸರಿಗೆ ಮಾಹಿತಿ ತಲುಪಿ ಅವರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆತನಿಗೆ ಮೃತದೇಹವನ್ನು ಹೊರಗೆ ಸಾಗಿಸಲು ಸಾಧ್ಯವಾಗದೇ ಹಾಗೆಯೇ ಮನೆಯಲ್ಲಿಟ್ಟುಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶೇ. 81 ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು, ಆಂಧ್ರ ಸಿಎಂ ಮೊದಲಿಗ, ಮಾಣಿಕ್ ಸರ್ಕಾರ್ ಬಡ ಸಿಎಂ

ಬಾಲಕನ ಪೋಷಕರಿಂದ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಬಾಲಕನನ್ನು ಅವದೇಶ್ ಕೊಲೆ ಮಾಡಿರಬಹುದು ಎನ್ನಲಾಗುತ್ತಿದೆ.

Get Latest updates on WhatsApp. Send ‘Subscribe’ to 8550851559