ಅಚ್ಚರಿಯ ಗಿಫ್ಟ್ ಕೊಡ್ತೀನಿ ಕಣ್ಮುಚ್ಚು ಅಂದ ಪತಿ, ಉಸರಿಗಟ್ಟಿಸಿ ಕೊಂದೇ ಬಿಟ್ಟ – News Mirchi

ಅಚ್ಚರಿಯ ಗಿಫ್ಟ್ ಕೊಡ್ತೀನಿ ಕಣ್ಮುಚ್ಚು ಅಂದ ಪತಿ, ಉಸರಿಗಟ್ಟಿಸಿ ಕೊಂದೇ ಬಿಟ್ಟ

ನವದೆಹಲಿ: ಗಂಡ ಹೆಂಡತಿಯ ನಡುವೆ ದೊಡ್ಡ ಜಗಳ ನಡೆದಿತ್ತು. ಹೀಗಾಗಿ ಇಬ್ಬರೂ ಬೇರೆ ಬೇರೆಯಾಗಿ ಉಳಿದಿದ್ದರು. ಆದರೆ ಇಬ್ಬರ ನಡುವಿನ ವಿರಸಕ್ಕೆ ಇತಿಶ್ರೀ ಹಾಡೋಣ, ನಡೆದ ಜಗಳ ಮರೆಯಲು ಅಚ್ಚರಿಯ ಉಡುಗೊರೆ ಕೊಡ್ತೀನಿ ಎಂದು ಪತ್ನಿಯನ್ನು ನಂಬಿಸಿದ್ದ ಪತಿರಾಯ. ನಂತರ ಇಬ್ಬರೂ ಪಾರ್ಕಿನಲ್ಲಿ ಭೇಟಿಯಾಗಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಪ್ರೀತಿಯಿಂದ ಆಕೆಯನ್ನು ಹತ್ತಿರ ಸೆಳೆದುಕೊಂಡ ಪತಿ, ಅಚ್ಚರಿಯ ಉಡುಗೊರೆಯೊಂದನ್ನು ನೀಡುತ್ತಿದ್ದೇನೆ, ಕಣ್ಣು ಮುಚ್ಚು ಎಂದು ಹೇಳಿದ. ಅಚ್ಚರಿಯ ಗಿಫ್ಟ್ ನನಗಾಗಿ ಗಂಡ ತಂದಿದ್ದಾನೆಂಬ ಖುಷಿಯಲ್ಲಿಯೇ ಆಕೆ ಕಣ್ಣು ಮುಚ್ಚಿಕೊಂಡಳು. ಹಾಗೆ ಆಕೆ ಕಣ್ಣು ಮುಚ್ಚುತ್ತಿದ್ದ ಕೂಡಲೇ ಈ ಮೊದಲೇ ಖರೀದಿಸಿ ತಂದಿದ್ದ ವೈರಿನಿಂದ ಆಕೆಯ ಕುತ್ತಿಗೆಗೆ ಉಸಿರಾಡದಂತೆ ಬಿಗಿಯಾಗಿ ಬಿಗಿದು ಕೊಂದೇ ಬಿಟ್ಟ.

ದೆಹಲಿಯ ಮನೋಜ್ ಕುಮಾರ್ ಎಂಬಾತನೇ ಪತ್ನಿಯನ್ನು ಕೊಲೆ ಮಾಡಿದ ವ್ಯಕ್ತಿ. ಈತ 2 ವರ್ಷಗಳ ಹಿಂದೆ ಕೋಮಲ್ ಎಂಬ ಯುವತಿಯನ್ನು ಮದುವೆಯಾಗಿದ್ದ. ಅವರು ಪ್ರೀತಿಸಿ ಮದುವೆಯಾಗಿದ್ದರೂ, ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಕೋಮಲ್ ಗೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದ ಮನೋಜ್ ಕುಮಾರ್, ಅದೇ ವಿಷಯವಾಗಿ ಪತ್ನಿಯ ಜೊತೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದ ಪತಿ, ಆಕೆಯನ್ನು ಹೇಗಾದರೂ ಸರಿ ಕೊಲೆ ಮಾಡಬೇಕು ಎಂದು ನಿರ್ಧರಿಸಿ ಫೋನ್ ಮಾಡಿ ಉತ್ತರ ದೆಹಲಿಯ ಬೋಂಟಾ ಪಾರ್ಕ್ ಗೆ ಬರುವಂತೆ ಹೇಳಿದ್ದ. ಆಕೆ ಬರುವ ಮುನ್ನವೇ ಕೊಲೆ ಮಾಡಲು ವೈರ್ ಖರೀದಿಸಿದ್ದ. ಆಕೆ ಬಂದೊಡನೆ ಅಂದುಕೊಂಡಿದ್ದು ಮಾಡಿ ಮುಗಿಸಿದ್ದ.

ಹತ್ಯೆ ಮಾಡಿದ ನಂತರ ಕಂಠಪೂರ್ತಿ ಕುಡಿದು ತಾನು ಮಾಡಿದ ಕೃತ್ಯವನ್ನು ಫೋನ್ ಮಾಡಿ ಸ್ನೇಹಿತರಿಗೆ ವಿವರಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸರು ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಕಾಡಿನಂತಿರುವ ಆ ಪಾರ್ಕಿನಲ್ಲಿ ಆಕೆಯನ್ನು ಕೊಂದ ಜಾಗವನ್ನೂ ಆತ ಗುರುತಿಸಲು ಆಗಲಿಲ್ಲ. ಆಕೆಯ ಮೃತದೇಹವನ್ನು ಹುಡುಕಲು ಪೊಲೀಸರಿಗೆ 6 ಗಂಟೆಗಳು ಹಿಡಿದವು.

Loading...