ರಾಜಕಾರಣಿಗಳಂತೆ ನಟಿಸಿ ವಂಚಿಸುತ್ತಿದ್ದವನ ಬಂಧನ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಶಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಸಹಾಯಕನಂತೆ ಹೇಳಿಕೊಂಡು ರಾಜಕಾರಣಿಗಳನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ 39 ವರ್ಷದ ಸಂಜಯ್ ಕುಮಾರ್ ಎಂಬಾತ ಇದುವರೆಗೂ 7 ರಾಜಕಾರಣಿಗಳನ್ನು ಹಣಕ್ಕಾಗಿ ವಂಚಿಸಿದ್ದು, ಇನ್ನೂ 10 ಜನರನ್ನು ವಂಚಿಸಲು ಪ್ರಯತ್ನಿಸಿದ್ದ.

17 ವರ್ಷಗಳ ಹಿಂದೆ ದೆಹಲಿಗೆ ಬಂದಿದ್ದ ತಿವಾರಿ, ಮೊದಲಿಗೆ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡಿದ್ದ. ನಂತರ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದ. ಅಲ್ಲಿ ಕುಟುಕು ಕಾರ್ಯಚರಣೆ ಮಾಡುವುದು ಹೇಗೆಂದು ತಿವಾರಿ ಚೆನ್ನಾಗಿ ಕಲಿತಿದ್ದ. ಇದೇ ವಿದ್ಯೆಯನ್ನು ರಾಜಕಾರಣಿಗಳನ್ನು ವಂಚಿಸಿ ಸುಲಭವಾಗಿ ಹಣ ಮಾಡುವ ದಂಧೆಗೆ ಇಳಿದಿದ್ದ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಹೆಸರಿನಲ್ಲಿ ಇತ್ತೀಚೆಗೆ ಜಾರ್ಖಂಡ್ ಕಂದಾಯ ಸಚಿವರಿಗೆ ಕರೆ ಮಾಡಿದ್ದ ತಿವಾರಿ, ಪಕ್ಷಕ್ಕೆ ಚುನಾವಣಾ ಫಂಡ್ ನೀಡುವಂತೆ ಕೇಳಿದ್ದ. ನಂತರ ಹಣ ಕೇಳಲು ಸಚಿವರಿದ್ದ ಜಾರ್ಖಂಡ್ ಭವನ್ ಗೆ ತನ್ನ ಸಹಚರನನ್ನು ಕಳುಹಿಸಿದ್ದ. ಆದರೆ ಆತನನ್ನು ಖಾಲಿ ಕೈಯಲ್ಲಿ ವಾಪಸ್ ಕಳುಹಿಸಿದ ಕಂದಾಯ ಸಚಿವರು, ರಾಮ್ ಮಾಧವ್ ಅವರ ಕಛೇರಿಯನ್ನು ಸಂಪರ್ಕಿಸಿದಾಗ ಇದು ವಂಚಕನ ಕೆಲಸ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಕ್ರೈಂ ಬ್ರಾಂಚ್ ಪೊಲೀಸರು ತಿವಾರಿ ಮತ್ತವನ ಸಹಚರ ಗೌರವ್ ಶರ್ಮಾನನ್ನು ಬಂಧಿಸಿದ್ದಾರೆ. ರಾಜಕೀಯ ಪಕ್ಷಗಳ ಹಿರಿಯ ರಾಜಕಾರಣಿಗಳಂತೆ ಪೋಸು ನೀಡುತ್ತಿದ್ದ ಈತ ಪಕ್ಷ ಟಿಕೆಟ್ ಅಥವಾ ಪ್ರಮುಖ ಹುದ್ದೆ ಕೊಡಿಸುವುದಾಗಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಂಚಿಸುತ್ತಿದ್ದ. ಆದರೆ ಯಾವತ್ತೂ ತಾನೇ ಖುದ್ದಾಗಿ ಭೇಟಿ ಮಾಡದೆ ಸಹಚರನನ್ನು ಹಣ ತೆಗೆದುಕೊಳ್ಳಲು ಕಳುಹಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

English Summary: Delhi police arrested a person who cheated political leaders in Delhi by posing as BJP national general secretary Ram Madhav, RSS general secretary Bhaiyyaji Joshi, and the personal assistant to Congress chief Sonia Gandhi.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache