ನೋಟು ರದ್ದು ಪ್ರಭಾವ ಹೇಗಿದೆ: ಸರ್ಕಾರದ ಆಂತರಿಕ ವರದಿ

ಸರ್ಕಾರದ ಆಂತರಿಕ ವರದಿಗಳ ಪ್ರಕಾರ ನೋಟು ಅಮಾನ್ಯೀಕರಣದ ಪರಿಣಾಮ ಭಯೋತ್ಪಾದನೆಗೆ ಹಣ ಸರಬರಾಜು ಮತ್ತು ನಕಲಿ ನೋಟು ದಂಧೆಗೆ ಪ್ರಬಲ ಪೆಟ್ಟು ಬಿದ್ದಿದೆ.

ಸರ್ಕಾರದ ಆಂತರಿಕ ವರದಿಯಲ್ಲೇನಿದೆ?

ನೋಟು ರದ್ದಾದ ನಂತರ ಭಯೋತ್ಪಾದಕ ದಾಳಿಗಳು ಶೇ.60 ರಷ್ಟು ಕಡಿಮೆಯಾಗಿವೆ. ಡಿಸೆಂಬರ್ ನಲ್ಲಿ ಒಂದು ಬ್ಲಾಸ್ಟ್ ಹೊರತು ಪಡಿಸಿದರೆ ಜಮ್ಮು ಕಾಶ್ಮೀರದಲ್ಲಿ‌ ಶೇ.60 ರಷ್ಟು ಉಗ್ರರ ದಾಳಿಗಳು ಕಡಿಮೆಯಾಗಿವೆ.

ನೋಟು ರದ್ದಾದ ನಂತರ ಹವಾಲಾ ವ್ಯವಹಾರ ಶೇ.50 ರಷ್ಟು ಕುಸಿತಗೊಂಡಿದೆ. ಪಾಕಿಸ್ತಾನದಲ್ಲಿ ಮುದ್ರಣವಾಗುತ್ತಿದ್ದ ನಕಲಿ ನೋಟು ದಂಧೆಗೆ ಭಾರೀ ಹಿನ್ನಡೆಯಾಗಿದೆ. ಹೊಸ ನೋಟು ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳಲ್ಲಿನ ಬದಲಾವಣೆ ನಕಲಿ ನೋಟುಗಳ ಮುದ್ರಣಕ್ಕೆ ಕಷ್ಟವಾಗಿದೆ.

ಇಲ್ಲಿಯವರೆಗೂ ಕರಾಚಿ ಮತ್ತು ಕ್ವೆಟ್ಟಾಗಳಲ್ಲಿ ಭಾರತದ ಕರೆನ್ಸಿಯನ್ನು ಪಾಕಿಸ್ತಾನ ಮುದ್ರಿಸುತ್ತಿತ್ತು ಎನ್ನಲಾಗಿದೆ.

ಭಯೋತ್ಪಾದಕರ ಕೈಯಲ್ಲಿದ್ದ ಭಾರೀ ಪ್ರಮಾಣದ ಭಾರತೀಯ ನೋಟುಗಳು ಭಾರತದಲ್ಲಿ ನೋಟು ರದ್ದಾದ ಕಾರಣ ಬೆಲೆ ಕಳೆದುಕೊಂಡಿವೆ.

ರೂ.500 ಮತ್ತು ರೂ.1000 ತೆಗೆದುಕೊಂಡು ಜಮ್ಮು ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ. ನೋಟು ರದ್ದು ಕ್ರಮ ಅಕ್ರಮ ಹಣ ಸರಬರಾಜಿಗೆ ಪೆಟ್ಟು ನೀಡಿದೆ ಎಂದು ವರದಿಗಳು ಹೇಳುತ್ತಿವೆ.

Loading...

Leave a Reply

Your email address will not be published.

error: Content is protected !!