ಇನ್ನೂ ಕುಸಿಯಲಿರುವ ಚಿನ್ನದ ಬೆಲೆ

ಚಿನ್ನದ ಬೆಲೆ ಇನ್ನೂ ಕುಸಿಯುತ್ತಾ? ಎಂಬ ಪ್ರಶ್ನೆಗೆ ಹೌದು ಇನ್ನುತ್ತಿವೆ ಬುಲಿಯನ್ ಮೂಲಗಳು. ಈಗಾಗಲೇ 6 ತಿಂಗಳ ಕನಿಷ್ಟ ದರಕ್ಕೆ ಕುಸಿದಿರುವ ಚಿನ್ನ, ಹತ್ತು ಗ್ರಾಂ ಗೆ ರೂ.26 ಸಾವಿರಕ್ಕೆ ಕುಸಿಯುತ್ತದೆ ಎನ್ನುತ್ತಿದ್ದಾರೆ. ಇದಕ್ಕೆ ಅವರು ಕೊಡುವ ಪ್ರಮುಖ ಕಾರಣಗಳು ಮೂರು.

ಒಂದನೆಯದು. ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿದ್ದು, ಪ್ರತಿ ವ್ಯಕ್ತಿಯ ಬಳಿ ಎಷ್ಟು ಚಿನ್ನವಿರಬಹುದು ಎಂದು ಹೇಳಿದ್ದು.

ಎರಡನೆಯದು: ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ.

ಮೂರನೆಯದು: ಚಿನ್ನದ ಆಮದು ಮಾಡಿಕೊಳ್ಳುವುದಕ್ಕೆ ಚೀನಾ ವಿಧಿಸಿದ ನಿರ್ಬಂಧಗಳು.

ಈ ಮೂರು ಕಾರಣಗಳಿಂದ ಈಗಾಗಲೇ ಆರು ತಿಂಗಳುಗಳ ಕನಿಷ್ಠ ಮಟ್ಟಕ್ಕೆ ಬಿದ್ದಿರುವ ಚಿನ್ನ, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಯಲ್ಲಿ ಸದ್ಯ ಚಿನ್ನದ ಮೇಲೆ ಹೂಡಿಕೆ ಅಷ್ಟು ಒಳ್ಳೆಯದಲ್ಲ ಎಂದು ಎಚ್ಚರಿಸುತ್ತಿದ್ದಾರೆ.

ನಿಜ ಹೇಳಬೇಕೆಂದರೆ, ನೋಟು ರದ್ದು ಪ್ರಕಟಣೆ ಹೊರಬೀಳುತ್ತಿದ್ದಂತೆ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಮೊದಲ ಒಂಬತ್ತು ದಿನಗಳಲ್ಲೇ ರೂ.140 ಕೋಟಿ ಮೌಲ್ಯದ 60-65 ಟನ್ ಚಿನ್ನವನ್ನು ಅಮದು ಮಾಡಿಕೊಂಡರು. ನಂತರ ಚಿನ್ನದ ಬೇಡಿಕೆ ಕುಸಿಯಿತು. ನೋಟು ರದ್ದು ನಂತರ ಚಿನ್ನದ ಮೇಲೂ ಸರ್ಕಾರ ಕಣ್ಣಿಟ್ಟಿದೆ ಎಂಬ ಪ್ರಚಾರಗಳಿಂದ ಬೆಲೆ ಕುಸಿಯಲು ಮುಖ್ಯವಾದ ಕಾರಣ