ನೋಟು ರದ್ದು ಅತ್ಯುತ್ತಮ ನಿರ್ಧಾರ : ಆಪಲ್ ಸಿಇಒ ಟಿಮ್ ಕುಕ್

ನರೇಂದ್ರ ಮೋದಿ ಸರ್ಕಾರದ ನೋಟು ರದ್ದು ತೀರ್ಮಾನ, ದೀರ್ಘಾವಧಿ ಪ್ರಯೋಜನಗಳನ್ನು ನೋಡಿದರೆ ಅತ್ಯುತ್ತಮ ನಡೆ ಎಂದು ಆಪಲ್ ಸಿಇಒ ಟಿಮ್ ಕುಕ್ ಹೊಗಳಿದ್ದಾರೆ. ಭಾರತದಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡಲು ಕಂಪನಿಯು ಉದ್ದೇಶಿಸಿದೆ ಎಂಬುದನ್ನು ಟಿಮ್ ಕುಕ್ ಒತ್ತಿ ಹೇಳಿದರು.

ನೋಟು ರದ್ದು ಕ್ರಮದ ನಂತರವೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಮಾರಾಟ ಉತ್ತಮವಾಗಿದೆ ಎಂದರು.

ನೊಟು ರದ್ದು ಕ್ರಮ ದೇಶದಲ್ಲಿ ಆರ್ಥಿಕ ಗೊಂದಲಗಳಿಗೆ ಕಾರಣವಾದರೂ, ನಮಗೆ ದಾಖಲೆಯ ಮಾರಾಟ ಫಲಿತಾಂಶ ಬಂದಿದೆ. ಹೀಗಾಗಿ ನಮಗೆ ಖುಷಿ ತಂದಿದೆ. ನೋಟು ರದ್ದು ಕ್ರಮ ಸದ್ಯ ನಿರೀಕ್ಷಿಸಿದಂತೆ ಪ್ರಭಾವ ಬೀರದಿದ್ದರೂ, ಮುಂದಿನ ದಿನಗಳಲ್ಲಿ ಖಚಿತವಾಗಿ ಇದರ ಪ್ರಭಾವ ಕಾಣಿಸಲಿದೆ ಎಂದರು.

English Summary: Apple CEO Tim Cook has hailed the demonetisation drive undertaken by the Indian government as a “great move” in the longer term.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache