ಯಾರದ್ದೋ ಕಪ್ಪು ಹಣ ತನ್ನ ಹೆಸರಲ್ಲಿ ಘೋಷಿಸಿಕೊಂಡು… – News Mirchi
We are updating the website...

ಯಾರದ್ದೋ ಕಪ್ಪು ಹಣ ತನ್ನ ಹೆಸರಲ್ಲಿ ಘೋಷಿಸಿಕೊಂಡು…

ನೋಟು ರದ್ದು ಮಾಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಕುಳಗಳಿಗೆ ಒಂದು ಸುವರ್ಣಾವಕಾಶ ನೀಡಿದ್ದರು. ತಮ್ಮಲ್ಲಿರುವ ಕಪ್ಪು ಹಣ ಘೋಷಿಸಿದರೆ ತೆರಿಗೆಯ ಜೊತೆಗೆ ಒಂದಷ್ಟು ದಂಡ ಹಾಕಿ ಬಿಟ್ಟು ಬಿಡ್ತೀವಿ, ವಿಚಾರಣೆಯ ಭಯ ಬೇಡ ಎಂದು ಹೇಳಿದ್ದರು. ಈ ಅವಕಾಶವನ್ನು ಹಲವರು ಬಳಸಿಕೊಂಡರು.

ಆದರೆ ಇಲ್ಲೊಬ್ಬಾತ ತನ್ನ ಬಳಿ ಕಪ್ಪು ಹಣವಿಲ್ಲದಿದ್ದರೂ ಕಮೀಷನ್ ಆಸೆಗೆ ಇತರರ ಕಪ್ಪು ಹಣ ಅಧಿಕೃತ ಗೊಳಿಸಲು ತನ್ನ ಹೆಸರಿನಲ್ಲಿ ಸಾವಿರಾರು ಕೋಟಿ ದಾಖಲೆಗಳಲ್ಲಿಲ್ಲದ ಹಣ ಇದೆ ಎಂದು ಕೊನೆ ಗಳಿಗೆಯಲ್ಲಿ ಘೋಷಿಸಿಕೊಂಡಿದ್ದ. ₹13,860 ಕೋಟಿ ಕಪ್ಪು ಹಣ ಘೋಷಿಸಿಕೊಂಡಿದ್ದ ಈತ, ನವೆಂಬರ್ 30 ರೊಳಗೆ ದಂಡದ ಮೊದಲ ಕಂತಾಗಿ 1,560 ಕೋಟಿ ಪಾವತಿಸಬೇಕಿತ್ತು. ಆದರೆ ಅದನ್ನು ಪಾವತಿಸಲು ವಿಫಲನಾಗಿ ನಾಪತ್ತೆಯಾಗಿದ್ದ. ಆತನ ಹೆಸರು ಮಹೇಶ್ ಶಾ, ಗುಜರಾತಿನ ರಿಯಲ್ ಎಸ್ಟೇಟ್ ಉದ್ಯಮಿ.

ನಾಪತ್ತೆಯಾಗಿದ್ದ ಈತ ದಿಡೀರ್ ಖಾಸಗಿ ಟಿವಿ ಸ್ಟುಡಿಯೋದಲ್ಲಿ ಪ್ರತ್ಯಕ್ಷವಾಗಿದ್ದು, ತಾನು ಘೋಷಿಸಿಕೊಂಡಿದ್ದ ಕಪ್ಪು ಹಣ ತನ್ನದಲ್ಲ, ಕಮೀಷನ್ ಆಸೆಗೆ ತಪ್ಪು ಮಾಡಿದೆ, ಆ ಹಣ ಯಾರಿಗೆ ಸೇರಿದ್ದು, ಎಲ್ಲಿಂದ ಬಂತು ಎಂಬ ವಿವರಗಳನ್ನೆಲ್ಲಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ಬಹಿರಂಗಪಡಿಸುತ್ತೇನೆ ಎಂದರು.

ವಿಷಯ ತಿಳಿದ ಅಧಿಕಾರಿಗಳು ಚಾನೆಲ್ ಸ್ಟುಡಿಯೋದಲ್ಲಿಯೇ ಮಹೇಶ್ ಷಾ ನನ್ನು ವಶಕ್ಕೆ ಪಡೆದಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!