ಈಗ ಹಣ ಪಡೆಯಿರಿ ಪೆಟ್ರೋಲ್ ಬಂಕ್ ಗಳಿಂದ

ಬ್ಯಾಂಕು, ಎಟಿಎಂ ಗಳ ಮುಂದೆ ಕ್ಯೂ ನಿಂತು ಹಣ ವಿತ್ ಡ್ರಾ ಮಾಡುತ್ತಿದ್ದವರು ಈಗ ದೇಶಾದ್ಯಂದ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿಯೂ ಹಣ ವಿತ್ ಡ್ರಾ ಮಾಡಬಹುದು.

ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಬಂಕ್ ಗಳಲ್ಲಿ ಸ್ವೈಪ್ ಮಾಡುವ ಮೂಲಕ ರೂ. 2 ಸಾವಿರ ವಿತ್ ಡ್ರಾ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈಗಾಗಲೇ ಎಸ್‌ಬಿ‌ಐ ನ ಪಿಒಸ್(ಪಾಯಿಂಟ್ ಆಫ್ ಸೇಲ್) ಉಪಕರಣಗಳು ಈಗಾಗಲೇ ಲಭ್ಯವಿರುವ ಪೆಟ್ರೋಲ್ ಬಂಕುಗಳಲ್ಲಿ ಈ ಸೌಲಭ್ಯ ಪಡೆಯಬಹುದು. ಒಬ್ಬ ವ್ಯಕ್ತಿ ರೂ. 2 ಸಾವಿರದ ವರೆಗೂ ನಗದು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಮೂರು ದಿನಗಳ ನಂತರ ಇನ್ನೂ 20 ಸಾವಿರ ಪೆಟ್ರೋಲ್ ಬಂಕ್ ಗಳಿಗೆ ಈ ಅವಕಾಶ ವಿಸ್ತರಿಸಲಾಗುವುದು ಎಂದು ಹೇಳಿದೆ.

Loading...

Leave a Reply

Your email address will not be published.

error: Content is protected !!