ನೋಟು ರದ್ದು ಸಮಸ್ಯೆ ‘ದೀರ್ಘಕಾಲದ ಲಾಭಕ್ಕಾಗಿ ಅಲ್ಪಾವಧಿಯ ನೋವು’

ರಾಯಘಡದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ (NISM)ನ ಹೊಸ ಕ್ಯಾಂಪಸ್ ಉದ್ಘಾಟಿಸಿದ ಮೋದಿ, ಸರ್ಕಾರದ ಗುರಿ ಗ್ರಾಮಗಳ ಅಭಿವೃದ್ದಿಯೇ ಹೊರತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅರೋಪಿಸಿದಂತೆ ಧನಿಕರ ಕಲ್ಯಾಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

‘ನೋಟು ರದ್ದು ಸಮಸ್ಯೆ ದೀರ್ಘಕಾಲದ ಲಾಭಕ್ಕಾಗಿ ಅಲ್ಪಾವಧಿಯ ನೋವು’ ಎಂದು ಪ್ರಧಾನಿ ಬಣ್ಣಿಸಿದರು. ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದೇ ವೇಳೆ ದೇಶದ ಹಿತಾಸಕ್ತಿಗಾಗಿ ಅಮೂಲಾಘ್ರ ಸುಧಾರಣಾ ಕ್ರಮಗಳನ್ನು ತರಲು ಹಿಂಜರಿಯುವುದಿಲ್ಲ ಎಂಬ ಸುಳಿವು ನೀಡಿದ ಮೋದಿ, ನೋಟು ರದ್ದು ಸಮಸ್ಯೆ ಅಲ್ಪಾವಧಿಯ ಸಮಸ್ಯೆ ಎಂದು ಸಮರ್ಥಿಸಿಕೊಂಡರು.

Loading...

Leave a Reply

Your email address will not be published.

error: Content is protected !!