ಪ್ರಧಾನಿಗೆ ರಾಹುಲ್ ಗಾಂಧಿ ಕೇಳಿದ 5 ಪ್ರಶ್ನೆಗಳು

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಯುದ್ಧ ಮುಂದುವರೆಸಿದ್ದಾರೆ. ನೋಟು ಅನಾಣ್ಯೀಕರಣವನ್ನು ವಿರೋಧಿಸುತ್ತಿರುವ ರಾಹುಲ್ ಗಾಂಧಿ, ಇದೀಗ ಪ್ರಧಾನಿ ಮೋದಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಿಗೆ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.

ನವೆಂಬರ್ 8ರಂದು 500, 1000 ರೂಪಾಯಿಗಳ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ರದ್ದ ಮಾಡಿದ ನಂತರ, ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಡಿಪಾಸಿಟ್ ಮಾಡಲು ನೀಡಿದ್ದ ಕಾಲಾವಧಿ ಮುಗಿಯುತ್ತಿರುವ ಹಿನ್ನೆಲೆಯ ರಾಹುಲ್ ಗಾಂಧಿ ಈ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳು ಕೆಳಗಿನಂತಿವೆ.

 

  • ನವೆಂಬರ್ 8ರಂದು ನೋಟು ರದ್ದು ಮಾಡಿದ ನಂತರ ಕಪ್ಪು ಹಣ ಎಷ್ಟು ಬಹಿರಂಗವಾಗಿದೆ?
  • ಭಾರತ ಆರ್ಥಿಕವಾಗಿ ಎಷ್ಟು ನಷ್ಟ ಹೊಂದಿದೆ? ಎಷ್ಟು ಜನ ತಮ್ಮ ಜೀವನಾಧಾಯವನ್ನು ಕಳೆದುಕೊಂಡರು?
  • ದೊಡ್ಡ ನೋಟು ರದ್ದಿನಿಂದಾಗಿ ಎಷ್ಟು ಜನ ಸಾವನ್ನಪ್ಪಿದ್ದಾರೆ? ಅವರ ಕುಟುಂಬಗಳಿಗೆ ಸರ್ಕಾರ ನಷ್ಟ ಪರಿಹಾರ ನೀಡಿದೆಯಾ? ಇಲ್ಲವೆಂದರೆ ಏಕೆ?
  • ದೊಡ್ಡ ನೋಟು ರದ್ದು ಮಾಡಬೇಕೆಂಬ ತೀರ್ಮಾನ ಕೈಗೊಳ್ಳುವ ಮುನ್ನ ಪ್ರಧಾನಿ ಸಂಪರ್ಕಿಸಿದ ತಜ್ಞರು ಯಾರು?
  • ದೊಡ್ಡ ನೋಟು ರದ್ದ ಮಾಡುವ ಹಿಂದಿನ ಎರಡು ತಿಂಗಳುಗಳ ಅವಧಿಯಲ್ಲಿ ಬ್ಯಾಂಕುಗಳಲ್ಲಿ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತ ಡಿಪಾಸಿಟ್ ಮಾಡಿದವರ ವಿವರಗಳನ್ನು ನೀಡಿ?
Loading...

Leave a Reply

Your email address will not be published.

error: Content is protected !!