ನೋಟು ರದ್ದು: ಉತ್ತರ ಪ್ರದೇಶದ ಜನತೆ ಏನು ಹೇಳುತ್ತಾರೆ

ಗರಿಷ್ಠ ಮುಖ ಬೆಲೆಯ ನೋಟು ರದ್ದುಗೊಳಿಸಿದ್ದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಮೋದಿ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಹೇಳುತ್ತಿವೆ. ಆದರೆ ಹತ್ತಿರವಾಗುತ್ತಿರುವ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳ ಜನರ ಪ್ರತಿಕ್ರಿಯೆ ಇವರು ಹೇಳಿದ್ದಕ್ಕಿಂದ ಭಿನ್ನವಾಗಿದೆ.

ಎಟಿಎಂ, ಅಂಚೆ ಕಛೇರಿ, ಬ್ಯಾಂಕುಗಳ ಎದುರು ಸಾಲುಗಟ್ಟಿ ನಿಂತಿದ್ದವರನ್ನು ಮಾತನಾಡಿಸಿದಾಗ ಬಹುತೇಕ ಜನ ಮೋದಿ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ತಮಗೆ ಸದ್ಯ ಸ್ವಲ್ಪ ತೊಂದರೆಯಾಗುತ್ತಿರುವ ಬಗ್ಗೆ ಕೋಪ ಇದ್ದರೂ, ಹೆಚ್ಚು ಜನ ಕಪ್ಪು ಹಣ ವಿರುದ್ಧದ ಯುದ್ಧದಲ್ಲಿ ಮೋದಿಗೆ ಬೆಂಬಲಿಸಿ ಮಾತನಾಡುತ್ತಿದ್ದಾರೆ. ಸಾಮಾನ್ಯವಾಗಿ ಸಮಸ್ಯೆ ಎದುರಿಸುತ್ತಿರುವವರು ಸರ್ಕಾರದ ವಿರುದ್ಧ ಅಸಂತೃಪ್ತಿ ವ್ಯಕ್ತಪಡಿಸುತ್ತಾರೆ. ಆದರೆ ಈಗಿನ ಪರಿಸ್ಥಿತಿಗಳು ವಿಭಿನ್ನವಾಗಿ ಕಾಣುತ್ತಿವೆ.

ದೊಡ್ಡ ತೀರ್ಮಾನ ಪ್ರಜೆಗಳ ಅನುಕೂಲಕ್ಕೇ ಎಂಬ ಭಾವನೆ ಉತ್ತರ ಪ್ರದೇಶದ ಜನತೆಯಲ್ಲಿ ಕಂಡು ಬರುತ್ತಿದೆ. ಅಷ್ಟೇ ಅಲ್ಲದೆ ಕಾಳ ಧನಿಕರ ವಿರುದ್ಧ ಮೋದಿ ಹೋರಾಡುತ್ತಿದ್ದಾರೆ ಎಂದು ಜನರು ಭಾವಿಸಿದ್ದಾರೆ. ಮೋದಿ ತೀರ್ಮಾನದಿಂದ ಜನರಿಗೆ ಒಳಿತಾಗುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಮತ್ತೊಂದು ಕಡೆ ನೋಟು ರದ್ದುಗೊಂಡ ತೀರ್ಮಾನದ ನಂತರ ಉತ್ತರ ಪ್ರದೇಶದ ನಾಯಕರು ಮೊದಲು ಆತಂಕಗೊಂಡಿದ್ದರು. ಆದರೆ ಜನಾಭಿಪ್ರಾಯ ಮಾತ್ರ ಮೋದಿ ಪರವಾಗಿ ಕಂಡುಬರುತ್ತಿರುವುದು ತುಸು ನೆಮ್ಮದಿ ನೀಡಿದೆ. ಆದರೆ ನೋಟು ಬದಲಾವಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯ ಪ್ರಭಾವ ಮುಂದೆ ಹೇಗಿರಬಹುದು ಎಂಬ ಆತಂಕ ಮಾತ್ರ ಉತ್ತರ ಪ್ರದೇಶದ ನಾಯಕರಲ್ಲಿ ಉಳಿದುಕೊಂಡಿದೆ.

Related News

loading...
error: Content is protected !!