Nitish - lalu -News-mirchi

ಮೈತ್ರಿ ಪಕ್ಷಗಳ ನಡುವೆ ಕಿಚ್ಚು ಹಚ್ಚಿದ ಮೋದಿ ನಿರ್ಧಾರ

ಭಾರತದ ಪ್ರಧಾನಮಂತ್ರಿ ಮೋದಿಯವರ ನೋಟು ರದ್ದು ತೀರ್ಮಾನ ಈಗ ಬಿಹಾರದ ನಾಯಕರ ನಡುವೆ ಕಿಡಿ ಹಚ್ಚುವಂತೆ ಕಾಣುತ್ತಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸ್ಪರ್ಧಿಸಿ‌ ಗೆದ್ದು ಬಿಹಾರದಲ್ಲಿ ಸರ್ಕಾರ ರಚಿಸಿದ್ದ ಆರ್‌ಜೆಡಿ ಡಿ – ಜೆಡಿಯು ಪಕ್ಷಗಳ ನಾಯಕರ ನಡುವೆ ವೈಮನಸ್ಸು ಹೆಚ್ಚುತ್ತಿರುವಂತೆ ಕಾಣುತ್ತಿದೆ.

ಗರಿಷ್ಠ ಮುಖ ಬೆಲೆಯ ನೋಟು ರದ್ದು ಮಾಡಿದ ಮೋದಿ ತೀರ್ಮಾನವನ್ನು ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಸ್ವಾಗತಿಸಿದ್ದಾರೆ. ಆದರೆ ನಿತೀಶ್ ನಿಲುವಿಗರ ಆರ್‌ಜೆಡಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೂಡಾ ನಿತೀಶ್ ಕುಮಾರ್ ಮೇಲೆ ಗುರ್ರ್ ಅನ್ನುತ್ತಿದ್ದಾರೆ.

ಹೀಗಾಗಿ ಇದುವರೆಗೂ ಜೊತೆಯಾಗಿದ್ದ ಆರ್‌ಜೆಡಿ – ಜೆಡಿಯು ಪಕ್ಷಗಳ ನಡುವೆ ಅಂತರ ಹೆಚ್ಚಾಗುತ್ತಿದ್ದೆಯಾ ಎಂಬ ಚರ್ಚೆಗಳೂ ಆರಂಭವಾಗಿವೆ. ಜನರಿಗೆ ತೀವ್ರ ಸಮಸ್ಯೆ ತಂದೊಡ್ಡಿದ ತೀರ್ಮಾನ ಕೈಗೊಂಡ ಮೋದಿಯನ್ನು ಹೇಗೆ ಹೊಗಳುತ್ತೀರಾ ಎಂದು ಆರ್‌ಜೆಡಿ ನಾಯಕರು ನಿತೀಶ್ ರವರನ್ನು ಪ್ರಶ್ನಿಸುತ್ತಿದ್ದಾರೆ. ಮೋದಿಯ ನೋಟು ರದ್ದು ನಿರ್ಧಾರ ಮೈತ್ರಿ ಪಕ್ಷಗಳನ್ನು ಒಡೆಯಲಿದೆಯಾ… ಕಾದು ನೋಡಬೇಕು.

Related Post

error: Content is protected !!