ನೋಟು ರದ್ದು: ಭಾರತದ ಹಾದಿಯಲ್ಲಿ ವೆನಿಜುವೆಲಾ

ಭಾರತದಲ್ಲಿ ಗರಿಷ್ಠ ಮುಖಬೆಲೆಯ ನೋಟು ರದ್ದುಗೊಂಡು ಇಂದಿಗೆ 35 ದಿನಗಳು ಕಳೆದವು. ಆದರೂ ಕರೆನ್ಸಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. 50 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಇದಕ್ಕೆ ನಾನು ಜವಾಬ್ದಾರಿ ಎಂದು ಪ್ರಧಾನಿ ಹೇಳಿದ್ದರು.

ಭಾರತದ ತೀರ್ಮಾನದ ಕುರಿತು ಹಲವು ದೇಶಗಳು ಪ್ರತಿಕ್ರಿಯಿಸಿದವು. ಕೆಲವು ಈ ತೀರ್ಮಾನವನ್ನು ಸಾಹಸ ಎಂದು ಹೊಗಳಿದರೆ, ರಷ್ಯಾ, ನೇಪಾಳದಂತ ದೇಶಗಳು ನೋಟು ರದ್ದು ನಂತರ ಉಂಟಾಗಿರುವ ಕರೆನ್ಸಿ ಕೊರತೆಯ ಬಗ್ಗೆ ಭಾರತದ ಗಮನಕ್ಕೆ ತಂದಿವೆ.

ಆದರೆ ಇದೀಗ ಭಾರತದ ಹಾದಿಯಲ್ಲೇ ಮತ್ತೊಂದು ದೇಶ ನೋಟು ರದ್ದು ಮಾಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ. ಲ್ಯಾಟಿನ್ ಅಮೆರಿಕಾ ದೇಶ ವೆನಿಜುವೆಲಾ ಕೂಡಾ, ಭಾರತದ ಪ್ರಧಾನಿಯಂತೆ ಇದ್ದಕ್ಕಿದ್ದಂತೆ ದೊಡ್ಡ ನೋಟು ರದ್ದು ಪಡಿಸುತ್ತಿರುವುದಾಗಿ ಅಲ್ಲಿನ ಅಧ್ಯಕ್ಷ ನಿಕೊಲಸ್ ಮ್ಯಾಡುರೋ ಹೇಳಿದ್ದಾರೆ. ಈ ಪ್ರಕ್ರಿಯೆ 72 ಗಂಟೆಗಳಲ್ಲಿ ಮಿಗಿಯಲಿದೆ. 100 ಬೊಲಿವರ್ ನೋಟು ರದ್ದು ಮಾಡುವ ಮೂಲಕ ಗಡಿಯಲ್ಲಿ ನಡೆಯುತ್ತಿರುವ ಸ್ಮಗ್ಲಿಂಗ್ ತಡೆಗಟ್ಟಬಹುದು, ಇದರ ಜೊತೆಗೆ ಆಹಾರ ಕೊರತೆಯೂ ನೀಗಲಿದೆ ಎಂದು ವೆನಿಜುವೆಲಾ ಅಧ್ಯಕ್ಷ ಹೇಳಿದ್ದಾರೆ.

ನೋಟು ರದ್ದು ಪ್ರಕ್ರಿಯೆಯಲ್ಲಿ ಕಡಿಮೆ ಸಮಯ ನೀಡುವುದರಿಂದ ಸ್ಮಗ್ಲರ್ ಗಳ ಆಟಕ್ಕೆ ಕಡಿವಾಣ ಹಾಕಬಹುದು ಎಂದು ಮ್ಯಾಡುರೋ ಸ್ಪಷ್ಟಪಡಿಸಿದರು. ಕಡಿಮೆ ಸಮಯದಲ್ಲಿಯೇ ದೊಡ್ಡ ನೋಟು ಸ್ಥಾನದಲ್ಲಿ ನಾಣ್ಯಗಳನ್ನು ತರುವುದು ಅಸಾಧ್ಯ ಎಂದು ಕೆಲವು ಅಭಿಪ್ರಾಯ ಪಡುತ್ತಿದ್ದಾರೆ.

ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 100 ಬೊಲಿವರ್ ನೋಟಿನ ಮೌಲ್ಯ ತುಂಬಾ ಕುಸಿದಿದೆ. ಅಮೆರಿಕಾ ಡಾಲರ್ ಗೆ ಹೋಲಿಸಿದರೆ ಅದರ ಬೆಲೆ ಎರಡು ಸೆಂಟ್ಸ್ ಗೆ ಕುಸಿದಿದೆ. ಇದೀಗ ಈ ತೀರ್ಮಾನದಿಂದ ವೆನಿಜುವೆಲಾದಲ್ಲಿ ಆರ್ಥಿಕ, ರಾಜಕೀಯ ಅಸ್ಥಿರತೆ ನೆಲೆಗೊಂಡಿದೆ. ಆ ದೇಶದ ಹಣದುಬ್ಬರವೂ ಚಿಂತಾಜನಕವಾಗಿದೆ. ಇಂತಹ ಪರಿಸ್ಥಿತಿಗಳಿಂದ ಹೇಗೆ ಆ ದೇಶ ಹೊರಬರುತ್ತದೆಯೋ ಕಾದು ನೋಡಬೇಕು.

Related News

Loading...

Leave a Reply

Your email address will not be published.

error: Content is protected !!