ನೋಟು ರದ್ದು : ವಿವರಣೆ ಕೇಳಿದ ಕೋರ್ಟ್

ನೋಟು ರದ್ದು ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮತ್ತು ಕೋಲ್ಕತಾ ಹೈಕೋರ್ಟ್ ನಿಂದ ಶುಕ್ರವಾರ ಕಠಿಣ ಪ್ರಶ್ನೆಗಳನ್ನು ಎದುರಿಸಿತು. ನೋಟು ರದ್ದು ಕಾರಣದಿಂದ ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ, ಗಲಭೆಗಳು ನಡೆಯುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ನೋಟು ರದ್ದು ಕುರಿತು ಕೂಡಲೇ ಸ್ಪಂದಿಸಬೇಕು ಎಂದು ಕೊಲ್ಕತಾ ಹೈಕೋರ್ಟ್ ಆದೇಶಿಸಿದೆ.

ನವೆಂಬರ್ 25 ರೊಳಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ತಮಗೆ ವಿವರಣೆ ನೀಡುವಂತೆ ಕೇಳಿದೆ. ಬ್ಯಾಂಕುಗಳ ಎದುರು ಸಾಲುಗಳಲ್ಲಿ ಜನ ನಿಂತು ಪರದಾಡುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಗಂಭೀರವಾಗಿ ಸ್ಪಂದಿಸಿದೆ. ಆದರೆ ತಮಗೆ ಕೇಂದ್ರ ಸರ್ಕಾರದ ವಿಧಾನಗಳನ್ನು ಬದಲಿಸುವ ಅವಕಾಶವಿಲ್ಲ, ಆದರೆ ಈ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಜಾರಿ ಸರಿ ಇಲ್ಲ ಎಂದು ಕೋಲ್ಕತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಕೀಲ ರಾಮಪ್ರಸಾದ್ ಸರ್ಕಾರ್ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋಲ್ಕತಾ ಹೈಕೋರ್ಟ್ ಕೇಂದ್ರಕ್ಕೆ ಹಲವು ಪ್ರಶ್ನೆ ಕೇಳಿದೆ. ಸರ್ಕಾರ ಜನರಿಗೆ ಬ್ಯಾಂಕ್ ಖಾತೆ ತೆರೆದು ಹಳೆಯ ನೋಟು ಅದರಲ್ಲಿ ಜಮೆ ಮಾಡುವಂತೆ ಕೋರಿದೆ, ಆದರೆ ಬ್ಯಾಂಕ್ ಅಕೌಂಟ್ ತೆರೆಯುವಾಗ ಜನ ಪಡುವ ಕಷ್ಟದ ಬಗ್ಗೆ ನಿಮಗೆ ತಿಳಿದಿದೆಯೇ? ತೆರಿಗೆ ವ್ಯಾಪ್ತಿಗೆ ಬರದ ಆದಾಯದ ಮೂಲಗಳ ವ್ಯಜ್ತಿಗಳ ಕಷ್ಟ ಎದುರಿಸುತ್ತಾರೆ. ಸಾಮಾನ್ಯ ಜನರಿಗೆ ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹಳೆಯ ನೋಟು ಸ್ವೀಕರಿಸುವಂತೆ ಕೇಂದ್ರ ಕ್ರಮ ಕೈಗೊಳ್ಳವಂತೆ ಆದೇಶಿಸಿದೆ.