ಡಿಸೆಂಬರ್ 30ರ ನಂತರ ವಿತ್ ಡ್ರಾ ಮಿತಿಯಲ್ಲಿ ಸಡಿಲಿಕೆ

ಬ್ಲಾಕ್ ಮನಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಘೋಷಿಸಿ ನೋಟು ರದ್ದು ಮಾಡಿ, ಹಳೆಯ ನೋಟು ಬದಲಾವಣೆಗೆ ನೀಡಿದ್ದ ಕಾಲಾವಧಿ ಡಿಸೆಂಬರ್ 30 ಸಮೀಪಿಸುತ್ತಿದೆ. ಸುಮಾರು 50 ದಿನಗಳ ನಂತರ ಅಂದರೆ ಡಿಸೆಂಬರ್ 30ರಂದು ನಂತರ ಪ್ರಧಾನಿ ನರೇಂದ್ರ ಮೋದಿ ನೋಟು ಅನಾಣ್ಯೀಕರಣದ ಕುರಿತು ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಭಾಷಣದಲ್ಲಿ ಬ್ಯಾಂಕುಗಳು, ಎಟಿಎಂ ಗಳಿಂದ ವಿತ್ ಡ್ರಾ ಮಾಡುವ ಹಣದ ಮಿತಿಯಲ್ಲಿ ಸಡಿಲಿಕೆ ಮಾಡಲಿದ್ದಾರೆ ನಂಬಲರ್ಹ ಮೂಲಗಳು ಹೇಳುತ್ತಿವೆ. ಸದ್ಯದ ನಿಯಮಗಳನ್ನು ಸಡಿಸಿಲಿ ಪ್ರತಿದಿನ ಎಟಿಎಂ ಮೂಲಕ ರೂ. 2,500 ರಿಂದ ರೂ. 4,000 ಮತ್ತು ಬ್ಯಾಂಕುಗಳ ಮೂಲಕ ಇದ್ದ ರೂ. 24 ಸಾವಿರ ಮಿತಿಯನ್ನು ಸಡಿಲಿಸಿ ರೂ. 40,000 ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಿರುವುದಾಗಿ ಘೋಷಣೆ ಮಾಡಲಿದ್ದಾರೆ ಎನ್ನುತ್ತಿದ್ದಾರೆ. ನವೆಂಬರ್ 8 ರ ರಾತ್ರಿ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುತ್ತಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದ ವಿಷಯ ತಿಳಿದದ್ದೇ.

ನೋಟು ರದ್ದುಗೊಳಿಸಿದ ನಂತರ, ಪರಿಸ್ಥಿತಿ ಸುಧಾರಿಸಲು ತನಗೆ 50 ದಿನಗಳ ಕಾಲಾವಕಾಶ ನೀಡಿ ಎಂದು ಪ್ರಧಾನಿ ದೇಶದ ಪ್ರಜೆಗಳನ್ನು ಕೋರಿದ್ದರು. ಆದರೆ ಇನ್ನೂ ನಗದು ಸಮಸ್ಯೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ನಗದು ವಿತ್ ಡ್ರಾ ಮೇಲೆ ವಿಧಿಸಿದ ನಿರ್ಬಂಧಗಳನ್ನು ಸಂಪೂರ್ಣ ತೆಗೆದುಹಾಕದೆ, ಸ್ವಲ್ಪ ಸಡಿಲಿಕೆ ಮಾಡಲಿದ್ದಾರೆ. ಈ ವಿಷಯವನ್ನು ಡಿಸೆಂಬರ್ 30 ರಂದು ಸಂಜೆ ಪ್ರಧಾನಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಈ ಕುರಿತು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.