ಮದುವೆಗೆ ನಿರಾಕರಿಸಿದನ ಮರ್ಮಾಂಗ ಕತ್ತರಿಸಿ ಪರಾರಿಯಾದ ಯುವತಿ – News Mirchi

ಮದುವೆಗೆ ನಿರಾಕರಿಸಿದನ ಮರ್ಮಾಂಗ ಕತ್ತರಿಸಿ ಪರಾರಿಯಾದ ಯುವತಿ

ನವದೆಹಲಿ: ಮದುವೆಯಾಗಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವತಿಯೊಬ್ಬಳು ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ. ನವದೆಹಲಿಯ ಮಂಗೋಲಪುರಿಯಲ್ಲಿ ಯುವತಿಯ ಸಹೋದರ ಮತ್ತು ಅತ್ತಿಗೆಯ ಎದುರೇ ಈ ಘಟನೆ ನಡೆದಿದ್ದು, ಮೂವರೂ ಈಗ ತಲೆಮರೆಸಿಕೊಂಡಿದ್ದಾರೆ ಎಂದು ಪೊಲಿಸರು ಹೇಳಿದ್ದಾರೆ.

ಬೀದಿ ಬದಿಯ ವ್ಯಾಪಾರಿ ಮತ್ತು ಯುವತಿ ನಡುವೆ ಕಳೆದೆರಡು ವರ್ಷಗಳಿಂದ ಸಂಬಂಧವಿತ್ತು. ಬುಧವಾರ ರಾತ್ರಿ ಸುಮಾರು 11:30 ಕ್ಕೆ ಕರೆ ಮಾಡಿದ ಯುವತಿಯ ಸಹೋದರ ಮತ್ತು ಅತ್ತಿಗೆ ಯುವಕನಿಗೆ ಕರೆ ಮಾಡಿ ಮದುವೆ ವಿಷಯ ಮಾತನಾಡಲು ಮನೆಗೆ ಬರುವಂತೆ ಹೇಳಿದ್ದಾರೆ. ಮಾತುಕತೆ ನಡುವೆ ಮನೆಗೆ ಬಂದ ಯುವಕನ ಜೊತೆ ಮೂವರೂ ವಾಗ್ವಾದ ನಡೆಸಿದ್ದಾರೆ. ಮದುವೆಗೆ ನಿರಾಕರಿಸಿದ ಯುವಕನನ್ನು ಬಾತ್ ರೂಮ್ ಗೆ ತಳ್ಳಿ ಬೆತ್ತಲೆ ಮಾಡಿ, ಮದುವೆಯಾಗ್ತೀಯಾ? ಎಂದು ಯವತಿ ಕೇಳಿದ್ದಾಳೆ. ಆತ ಇಲ್ಲ ಅನ್ನುತ್ತಿದ್ದಂತೆ ಆಕ್ರೋಶಗೊಂಡು ಅಡುಗೆ ಮನೆಯಿಂದ ಚೂರಿ ತೆಗೆದುಕೊಂಡು ಬಂದ ಯುವತಿ ಆತನಿಗೆ ಹಲವು ಬಾರಿ ಇರಿದು, ಆತನ ಮರ್ಮಾಂಗವನ್ನು ಕತ್ತರಿಸಳು ಪ್ರಯತ್ನಿಸಿ ನಂತರ ಸ್ಥಳದಿಂದ ಪರಾರಿಯಾಗಿದ್ದಾಳೆ.

ಹೇಗೋ ಕಷ್ಟಪಟ್ಟು ಹೊರಗೆ ಬಂದ ಯುವಕನನ್ನು ಸ್ಥಳೀಯರು ಹತ್ತಿರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಮರ್ಮಾಂಗಕ್ಕೆ ಗಂಭೀರ ಗಾಯವಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

Loading...