ಆರ್‌ಬಿ‌ಐ ನಿಂದ ಮತ್ತೊಂದು ಶಾಕ್: ಹಳೆ ನೋಟು ಡಿಪಾಸಿಟ್ ಗೆ ಹೊಸ ನಿಯಮ – News Mirchi

ಆರ್‌ಬಿ‌ಐ ನಿಂದ ಮತ್ತೊಂದು ಶಾಕ್: ಹಳೆ ನೋಟು ಡಿಪಾಸಿಟ್ ಗೆ ಹೊಸ ನಿಯಮ

ಹಳೆಯ 500, 1000 ಮುಖಬೆಲೆಯ ನೋಟುಗಳು ರದ್ದಾದ ನಂತರ, ಇದೀಗ ರಿಸರ್ವ್ ಬ್ಯಾಂಕ್ ಹೊಸ ತೀರ್ಮಾನ ಕೈಗೊಂಡಿದೆ. ಇಲ್ಲಿಯವರೆಗೆ ಹಳೆಯ ನೋಟುಗಳನ್ನು ಬ್ಯಾಂಕ್ ಅಕೌಂಟಿಗೆ ಎಷ್ಟು ಬೇಕಾದರೂ ಜಮೆ ಮಾಡುವ ಅವಕಾಶವನ್ನು ಮೊಟಕುಗೊಳೊಸಿದ್ದು, ಇನ್ನು ಮುಂದೆ ರೂ. 5000 ವರೆಗೂ ಹಳೆಯ ನೋಟುಗಳನ್ನು ಎಷ್ಟು ಬಾರಿಯಾದರೂ ಖಾತೆಗೆ ಜಮೆ ಮಾಡಬಹುದು. ಅದಕ್ಕಿಂತ ಹೆಚ್ಚು ಜಮೆ ಮಾಡಬೇಕೆಂದರೆ ಒಮ್ಮೆ ಮಾತ್ರ ಅವಕಾಶವಿರುತ್ತದೆ.

ಅಷ್ಟೇ ಅಲ್ಲದೆ ಇದುವರೆಗೂ ಹಳೆ ನೋಟುಗಳನ್ನು ಏಕೆ ಡಿಪಾಸಿಟ್ ಮಾಡಿಲ್ಲ ಎಂಬುದಕ್ಕೆ ಸೂಕ್ತ ಕಾರಣ ನೀಡಿ, ಆ ಕಾರಣ ಬ್ಯಾಂಕಿನವರಿಗೆ ತೃಪ್ತಿ ತಂದರೆ ಮಾತ್ರ ಡಿಪಾಸಿಟ್ ಮಾಡಿಸಿಕೊಳ್ಳುತ್ತಾರೆ.

ದೊಡ್ಡ ಮೊತ್ತದ ಹಳೆಯ ನೋಟುಗಳನ್ನು ಜಮೆ ಮಾಡಲು ಒಂದೇ ಬಾರಿ ಅವಕಾಶವಿದೆಯಾದರೂ, ಅದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಮಾತ್ರ ತೆಗೆದುಕೊಳ್ಳಬೇಕು, ಇಲ್ಲವೆಂದರೆ ರೂ. 50 ಸಾವಿರ ಡಿಪಾಸಿಟ್ ಮಾಡಿಸಿಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಆದೇಶಿಸಿದೆ. ಮೂರನೇ ವ್ಯಕ್ತಿ ಖಾತೆಗೆ ಹಣ ಜಮೆ ಮಾಡಬೇಕೆಂದರೆ ಮೂರನೇ ವ್ಯಕ್ತಿಯಿಂದ ಅನುಮತಿ ಪಡೆದಂತೆ ಸಾಕ್ಷಿ ತೋರಿಸಿ ಜಮೆ ಮಾಡಬೇಕಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

Loading...

Leave a Reply

Your email address will not be published.