ಜೈಲಿನಲ್ಲಿ ಡೇರಾ ಸಚ್ಚಾ ಸೌದಾ ಬೆಂಬಲಿಗನ ಸಾವು – News Mirchi

ಜೈಲಿನಲ್ಲಿ ಡೇರಾ ಸಚ್ಚಾ ಸೌದಾ ಬೆಂಬಲಿಗನ ಸಾವು

ಡೇರಾ ಸಚ್ಚಾ ಸೌದಾ ಬೆಂಬಲಿಗನೊಬ್ಬ ಅಂಬಾಲಾ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಗುರ್ಮೀತ್ ರಾಮ್ ರಹೀಮ್ ವಿರುದ್ಧ ತೀರ್ಪು ಬಂದ ನಂತರ ಪಂಚಕುಲದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರವೀಂದರ್ ಕುಮಾರ್ ಬಂಧನವಾಗಿತ್ತು. ಜೈಲಿನಲ್ಲಿ ಈತ ಸಾವಿಗೀಡಾಗಿದ್ದು, ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಜೈಲು ಅಧಿಕಾರಿಗಳು ಆದೇಶಿಸಿದ್ದಾರೆ.

ಉತ್ತರ ಪ್ರದೇಶ ಮೂಲಕ ರವೀಂದರ್ ಕುಮಾರ್ ವಿರುದ್ಧ ಕೊಲೆಯತ್ನ, ಗಲಭೆ, ಸಾರ್ವಜನಿಕ ಆಸ್ತಿ ಧ್ವಂಸ ಮತ್ತು ಹಲ್ಲೆ ಮಾಡಿದ ಕ್ರಿಮಿನಲ್ ಆರೋಪಗಳಿವೆ.

Contact for any Electrical Works across Bengaluru

Loading...
error: Content is protected !!