ಗಾಂಧಿ ನಾಡಿನಲ್ಲಿ ಗೋಡ್ಸೆ ಹೀರೋ

ಸಾಹಿತಿ ದೇವನೂರು ಮಹದೇವ ಅವರು ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಪೇಶ್ವೆ ಆಡಳಿತಕ್ಕೆ ಹೋಲಿಸಿದ್ದಾರೆ. ದೇಶದಲ್ಲಿ ಪೇಶ್ವೆ ಮಾದರಿಯ ಆಡಳಿತ ನಡೆಯುತ್ತಿದೆ, ಪ್ರಧಾನಿ ನುಡಿದಂತೆ ನಡೆದುಕೊಳ್ಳುತ್ತಿಲ್ಲ, ಅವರು ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವರಾಜ್ ಇಂಡಿಯಾ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ದೇಶದಲ್ಲಿ ಉದ್ಯೋಗ ಸೃಷ್ಟಿ ನಿರೀಕ್ಷಿತ ಮಟ್ಟದಲ್ಲಿಲ್ಲ, ಇದರಿಂದಾಗಿ ನಿರುದ್ಯೋಗಿ ಯುವಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ ದೇವನೂರು, ಗಾಂಧಿ ನಾಡಿನಲ್ಲಿ ಗೋಡ್ಸೆ ಹೀರೋ ಆಗುತ್ತಿದ್ದಾನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.