ಶಂಕರಮೂರ್ತಿ ಸ್ಥಾನ ಅಬಾಧಿತ, ಕಾಂಗ್ರೆಸ್ ಗೆ ಮುಖಭಂಗ – News Mirchi

ಶಂಕರಮೂರ್ತಿ ಸ್ಥಾನ ಅಬಾಧಿತ, ಕಾಂಗ್ರೆಸ್ ಗೆ ಮುಖಭಂಗ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರನ್ನು ಸಭಾಪತಿ ಸ್ಥಾನದಿಂದ ಪದಚ್ಯುತಗೊಳಿಸಲು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಕಾಂಗ್ರೆಸ್ ಗೆ ತೀರ್ವ ಮುಖಭಂಗವಾಗಿದೆ. ಅವಿಶ್ವಾಸ ನಿರ್ಣಯದ ಪರ 36 ಮತಗಳು ಚಲಾವಣೆಯಾಗಿದ್ದು, ನಿರ್ಣಯದ ವಿರುದ್ಧ 37 ಮತಗಳು ಬಿದ್ದಿವೆ. ಹೀಗಾಗಿ ಕಾಂಗ್ರೆಸ್ ಪ್ರಯತ್ನ ವಿಫಲವಾಗಿದ್ದು, ಡಿ.ಹೆಚ್.ಶಂಕರಮೂರ್ತಿಯವರ ಸಭಾಪತಿ ಸ್ಥಾನ ಅಭಾಧಿತ.

ಜೆಡಿಎಸ್ ಸದಸ್ಯರು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಿದರು. ವಿಧಾನ ಪರಿಷತ್ ನಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಎರಡು ತಿಂಗಳ ನಂತರ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡುವ ಪ್ರಸ್ತಾಪ ಮಾಡಿರುವುದಾಗಿ ಅವರು ಹೇಳಿದರು. ಹೀಗಾಗಿ ಮುಂದಿನ 2 ತಿಂಗಳು ಶಂಕರ ಮೂರ್ತಿಯವರು ಸಭಾಪತಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ಅಡ್ಡಿಯಿಲ್ಲ.

ವಿಶ್ವಾಸ ಮತದಲ್ಲಿ ಗೆದ್ದ ಡಿ.ಹೆಚ್.ಶಂಕರಮೂರ್ತಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

Contact for any Electrical Works across Bengaluru

Loading...
error: Content is protected !!