ಧನುಷ್ ಹುಟ್ಟು ಮಚ್ಚೆ ತೋರಿಸಬೇಕಂತೆ

ಚೆನ್ನೈ: ನಟ ಧನುಷ್ ಗೆ ಸಂಬಂಧಿಸಿದಂತೆ ಸಾಕ್ಷಿಗಳಿಗಳನ್ನು ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ವ್ಯಾಪ್ತಿಯ ಮಧುರೈ ಕೋರ್ಟ್ ಧನುಷ್ ಗೆ ಆದೇಶಿಸಿದೆ. ಮಧುರೈ ಜಿಲ್ಲೆಯ ಮೇಲೂರು ಗ್ರಾಮದ ಕದಿರೇಷನ್, ಮೀನಾಕ್ಷಿ ದಂಪತಿಗಳು ಧನುಷ್ ತಮ್ಮ ಮಗನೆಂದು ಹೇಳಿ ಮಧುರೈ ಕೋರ್ಟಿನಲ್ಲಿ ದಾಖಲಿಸಿದ ಪಿಟೀಷನ್, ಅವರು ಕೋರ್ಟಿಗೆ ಸಲ್ಲಿಸಿದ ಪತ್ರಗಳನ್ನು ಜಸ್ಟೀಸ್ ಜಿ.ಚೊಕ್ಕಲಿಂಗಂ ಪರಿಶೀಲಿಸಿದರು. ಬರ್ತ್ ಮಾರ್ಕ್ಸ್ (ಹುಟ್ಟುಮಚ್ಚೆ) ಪರಿಶೀಲನೆಗೆ ಈ ತಿಂಗಳು 28ರೊಳಗೆ ಕೋರ್ಟಿಗೆ ಹಾಜರಾಗಬೇಕೆಂದು ಮಧುರೈ ಕೋರ್ಟ್ ಸೂಚಿಸಿದೆ.

ಹೀರೋ ಧನುಷ್ ಚೆನ್ನೈನಲ್ಲಿನ ಪಾಠಶಾಲೆಯಲ್ಲಿ ಓದುತ್ತಿದ್ದ ಸಾಕ್ಷಿಗಳನ್ನು, ಆತ ಹತ್ತನೆಯ ತರಗತಿ ಪರೀಕ್ಷೆ ಬರೆದ ಪತ್ರಗಳನ್ನು, 2002ರಲ್ಲಿ ಉದ್ಯೋಗಕ್ಕಾಗಿ ಎಂಪ್ಲಾಯ್ಮೆಂಟ್ ಕಛೇರಿಯಲ್ಲಿ ತನ್ನ ಹೆಸರನ್ನು ನೋಂದಣಿ ಮಾಡಿಕೊಂಡಿದ್ದ ಪುರಾವೆಗಳನ್ನು ದಂಪತಿಗಳು ನ್ಯಾಯಾಲಯಕ್ಕೆ ನೀಡಿದರು. ಧನುಷ್ ಪರ ವಕೀಲರು ಸಲ್ಲಿಸಿದ ಸಾಕ್ಷಿಗಳನ್ನು ನ್ಯಾಯಮೂರ್ತಿಗಳು ಪರಿಶೀಲಿಸಿದರು. ಆದರೆ ಧನುಷ್ ಮೊದಲ ಚಿತ್ರ 2002ರಲ್ಲಿ ಬಿಡುಗಡೆಯಾಗಿತ್ತು. ಮತ್ತೊಂದು ಕಡೆ ಕದಿರೇಷನ್, ಮೀನಾಕ್ಷಿ ದಂಪತಿಗಳು ಕೋರ್ಟಿಗೆ ನೀಡಿದ ಟಿಸಿಯಲ್ಲಿ ಹುಟ್ಟು ಮಚ್ಚೆ ವಿವರಗಳಿವೆ, ಆದರೆ ಧನುಷ್ ಕೋರ್ಟ್ ಗೆ ನೀಡಿದ ಹತ್ತನೆಯ ತರಗತಿ ಟಿಸಿಯಲ್ಲಿ ಯಾವುದೇ ಗುರುತಿನ ಮಚ್ಚೆಗಳಿಲ್ಲ. ಹೀಗಾಗಿ ವೆರಿಫಿಕೇಷನ್ ಗಾಗಿ ಧನುಷ್ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಮಧುರೈ ಕೋರ್ಟ್ ಆದೇಶಿಸಿದೆ.

Loading...

Leave a Reply

Your email address will not be published.

error: Content is protected !!