ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ರೂಪಾಗೆ ಎತ್ತಂಗಡಿ ಶಿಕ್ಷೆ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಕುರಿತು ಧ್ವನಿಯೆತ್ತಿದ್ದ ಡಿಐಜಿ ರೂಪಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾರಿಂದ ಹಿರಿಯ ಅಧಿಕಾರಿಯೊಬ್ಬರು 2 ಕೋಟಿ ಲಂಚ ಪಡೆದು ವಿಶೇಷ ಸವಲತ್ತು ನೀಡಿದ್ದಾರೆ ಎಂದು ಆರೋಪಿಸಿದ್ದ ರೂಪಾ ಅವರು, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಗಾಂಜಾ ಸರಬರಾಜು ಮುಂತಾದ ಹಲವು ಅಕ್ರಮಗಳ ಕುರಿತು ವರದಿ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು.

ಮಾಧ್ಯಮಗಳ ಮುಂದೆ ಬಂದಿದ್ದ ರೂಪಾ ಅವರಿಗೆ ಸರ್ಕಾರ ನೋಟೀಸ್ ಕೂಡಾ ನೀಡಿತ್ತು. ಇದೀಗ ಎಲ್ಲರೂ ನಿರೀಕ್ಷಿಸಿದಂತೆ ಡಿಐಜಿ ರೂಪಾ ಅವರನ್ನು ಎತ್ತಂಗಡಿ ಮಾಡಲಾಗಿದೆ. ರಾಜ್ಯ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾಗಿ ರೂಪಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಲಂಚ ಪಡೆದ ಆರೋಪ ಹೊತ್ತಿರುವ ಡಿಜಿಪಿ ಸತ್ಯನಾರಾಯಣ ಅವರೂ ಸೇರಿದಂತೆ ಒಟ್ಟು ಐದು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಜೈಲಿನಲ್ಲಿ ರಾಜಾತಿಥ್ಯ, ಅಧಿಕಾರಿಗೆ ನೀಡಿದ್ದಾರಂತೆ 2 ಕೋಟಿ ಲಂಚ!

ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ ಎಂದು ಹೇಳಿದ್ದಾರೆ. ಕಾರಾಗೃಹದಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾ ಅವರಿಗೆ ಸರ್ಕಾರ ನೀಡಿದ ಬೆಲೆ ಇದು ಎಂದು ಕಿಡಿ ಕಾರಿದ್ದಾರೆ.

ಜೈಲಿನಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ರೂಪಾಗೆ ನೋಟೀಸ್

Related News

Loading...
error: Content is protected !!