Big Breaking News

ಡಬ್ಬಾವಾಲಾಗಳಿಗೆ ಡಿಜಿಟಲ್ ಪೇಮೆಂಟ್

ದೇಶದಲ್ಲಿ ಸಮಯ ಪಾಲನೆಗೆ ಮತ್ತೊಂದು ಹೆಸರೇ ಮುಂಬಯಿಯ ಡಬ್ಬಾವಾಲಾಗಳು. ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾದ ಭಾಗವಾಗಿ ಮುಂದೆ ಸಾಗುತ್ತೇವೆ, ತಮ್ಮ ಸೇವೆಗಳಿಗೆ ತಂತ್ರಜ್ಞಾನವನ್ಮು ಬಳಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಇದರ ಭಾಗವಾಗಿ ಡಿಜಿಟಲ್ ವೆಬ್ಸೈಟ್ ಆರಂಭಿಸಿದ್ದಾರೆ.

Download Free

ಸಮಯ, ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಡಿಜಿಟಲ್ ವೆಬ್ಸೈಟ್ ಆರಂಭಿಸಿದ್ದೇವೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ವೆರಿಫಿಕೇಷನ್ ಆದ ನಂತರವೇ ಗ್ರಾಹಕರನ್ನು ನೋಂದಣಿ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಗ್ರಾಹಕರು ಆನ್ಲೈನ್ ನಲ್ಲಿಯೇ ರಿಜಿಸ್ಟರ್ ಮಾಡಿಕೊಂಡು ತಾವಿದ್ದಲ್ಲಿಯೇ ಸೇವೆ ಪಡೆಯಬಹುದು ಎಂದು ಹೇಳುತ್ತಿದ್ದಾರೆ. ವೆಬ್ಸೈಟ್ ನಿಂದ ಹಣ ಪಾವತಿಯೂ ಸುಲಭವಾಗುತ್ತದೆಯಂತೆ. ಚೇಂಜಿಂಗ್ ಇಂಡಿಯಾದಲ್ಲಿ ತಾವೂ ಕೂಡಾ ಭಾಗಿಯಾಗುತ್ತಿದ್ದೇವೆ, ಪ್ರಧಾನಿಯ ಕನಸಿನಂತೆ ನಗದು ರಹಿತ ಆರ್ಥಿಕ ವ್ಯವಸ್ಥೆ ಖಂಡಿತ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡಬ್ಬಾವಾಲಾಗಳು.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache