ಗೋವಾ 'ಕೈ' ತಪ್ಪಲು ದಿಗ್ವಿಜಯ್ ಕಾರಣ |News Mirchi

ಗೋವಾ ‘ಕೈ’ ತಪ್ಪಲು ದಿಗ್ವಿಜಯ್ ಕಾರಣ

ಗೋವಾ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಗೆ ಅಧಿಕಾರ ಕೈ ತಪ್ಪಲು ಗೋವಾ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್ ಸಿಂಗ್ ಅವರೇ ಕಾರಣ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರೋಪಿಸಿದ್ದಾರೆ.

ಫಲಿತಾಂಶ ಹೊರಬರುತ್ತಿದ್ದಂತೆ ಪಕ್ಷೇತರ ಶಾಸಕರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದರು. ಕಾಂಗ್ರೆಸ್ ಗೆ 21 ಶಾಸಕರ ಬೆಂಬಲವಿತ್ತು. ಆದರೆ ಬೆಂಬಲಿಸುತ್ತಿರುವಂತೆ ಶಾಸಕರಿಂದ ಸಹಿ ಪಡೆದಿರಲಿಲ್ಲ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಿಗೆ ಪತ್ರ ನೀಡಲು ಸಿದ್ಧವಿದ್ದೆವು. ಆದರೆ ರಾಜ್ಯಪಾಲರೇ ಸರ್ಕಾರ ರಚನೆಗೆ ಆಹ್ವಾನ ನೀಡುತ್ತಾರೆ, ಅಲ್ಲಿಯವರೆಗೂ ಸುಮ್ಮನಿರುವಂತೆ ದಿಗ್ವಿಜಯ್ ಸೂಚಿಸಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ರಚಿಸಲು ಅನುಕೂಲವಾಯಿತು ಎಂದು ಅವರು ಹೇಳಿದ್ದಾರೆ.

Loading...
loading...
error: Content is protected !!