ಸಾವಿನ ಕುರಿತ ಕೆಲ ಭಯಾನಕ ಸತ್ಯಗಳು

ಸಾವು ಅನಿವಾರ್ಯವಾದರೂ, ಎಂದೋ ಒಂದು ದಿನ ಎಲ್ಲರೂ ಸಾಯಲೇ ಬೇಕು ಎಂಬುದು ತಿಳಿದರೂ ಇದರ ಕುರಿತು ಯೋಚಿಸಲು, ಒಪ್ಪಿಕೊಳ್ಳಲು ಮನಸ್ಸು ಹಿಂಜರಿಯುತ್ತದೆ. ನಾವು ಬದುಕಿರುವುದು ಎಷ್ಟು ಸತ್ಯವೋ, ಅದಕ್ಕಿಂತ ಕಠೋರ ಸತ್ಯವೆಂದರೆ ಯಾವುದೋ ಒಂದು ದಿನ ಸಾವು ನಮ್ಮನ್ನು ಕರೆದೊಯ್ಯುತ್ತದೆ. ಆ ದಿನ ತುಂಬಾ ಕೆಟ್ಟದಾಗಿರಬಹುದು. ಸಿನಿಮಾಗಳಲ್ಲಿ ಸಾಯುವುದುನ್ನು ನೋಡುವುದು ಸುಲಭ, ಆದರೆ ನಮ್ಮ ಪರಿಚಯಸ್ಥರು ಸಾಯುವ ಸಂದರ್ಭದಲ್ಲಿ ನಮಗೆ ನರಕದಂತೆ ಗೋಚರಿಸುತ್ತದೆ. ನಿಮಗೆ ಹೆದರಿಸುವ ಉದ್ದೇಶ ನಮಗಿಲ್ಲ, ಆದರೆ ಸಾವಿಗೆ ಸಂಬಂಧಿಸಿದಂತೆ ಕೆಲಸ ಸತ್ಯಗಳನ್ನು ನಿಮ್ಮ ಮುಂದಿಡಲಿದ್ದೇವೆ…

1. ನಾವು ಸತ್ತ ನಂತರ ನಮ್ಮೊಳಗಿರುವ ಕಿಣ್ವಗಳು(ಎಂಜಿಮ್ಸ್) ನಮ್ಮ ದೇಹವನ್ನು ತಿನ್ನಲು ಶುರು ಮಾಡುತ್ತವೆ

ನಾವು ಏನೇ ಆಹಾರ ಸೇವಿಸಿದರೂ, ನಮ್ಮ ಹೊಟ್ಟೆಯಲ್ಲಿರುವ ಕಿಣ್ವಗಳೂ(ಎಂಜಿಮ್ಸ್) ಆಹಾರ ತಿನ್ನುತ್ತವೆ. ಆದರೆ ನಾವು ಸತ್ತ ನಂತರ, ಆ ಬ್ಯಾಕ್ಟೀರಿಯಾಗಳು ಮೊದಲ ಮೂರು ದಿನಗಳವರೆಗೆ ನಮ್ಮ ಹೊಟ್ಟೆಯಲ್ಲಿರುವ ಆಹಾರವನ್ನು ತಿನ್ನಲು ಆರಂಭಿಸುತ್ತವೆ. ಹೊಟ್ಟೆಯಲ್ಲಿನ ಆಹಾರ ಮುಗಿದ ಮೇಲೆ, ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಒಳಗಿನಿಂದ ತಿನ್ನಲು ಶುರು ಮಾಡುತ್ತವೆ. ಸತ್ತ 2-3 ದಿನಗಳ ನಂತರ ದೇಹ ಕೊಳೆಯುವುದು ಇದೇ ಕಾರಣಕ್ಕಾಗಿ.

2.ವೈದ್ಯರ ಕೈಬರಹ (handwriting)ದಿಂದ ಸಾವು
ವೈದ್ಯರ ಕೈಬರಹ ಹೇಗಿರುತ್ತದೆ ಎಂಬುದನ್ನು ನಾವು ನೋಡಿರುತ್ತೇವೆ. ಅವರು ಬರೆದ ಔಷಧಗಳ ಚೀಟಿ ಮೆಡಿಕಲ್ ನವರಿಗೆ ಬಿಟ್ಟರೆ ನಾವು ಆ ಸಾಹಸಕ್ಕೆ ಕೈಹಾಕಬಾರದು. ಈ ಅರ್ಥವಾಗದ ಔಷಧಿಗಳ ಚೀಟಿಗಳ ಕಾರಣದಿಂದ ಬೇರೆ ಔಷಧಿಗಳನ್ನು ಖರೀದಿಸಿ ಪ್ರತಿ ವರ್ಷ ಪ್ರಪಂಚದಲ್ಲಿ 7000 ಜನ ಸಾವನ್ನಪ್ಪುತ್ತಿದ್ದಾರಂತೆ.

3. ನಾವು ಸತ್ತ ಮೇಲೆ ನಮ್ಮ ಉಗುರುಗಳು ಬೆಳೆಯುವುದಿಲ್ಲ
ನಾವು ಸತ್ತ ನಂತರೂ ನಮ್ಮ ಉಗುರುಗಳು ಬೆಳೆಯುತ್ತವೆ ಎಂದು ಬಹುತೇಕ ಜನ ನಂಬಿದ್ದಾರೆ. ಆದರೆ ಅದು ಸುಳ್ಳು. ನಮ್ಮ ಉಗುರುಗಳ ಸುತ್ತಲಿನ ಚರ್ಮವು ಸತ್ತ ನಂತರ ಸುಕ್ಕುಗಟ್ಟಲು ಆರಂಭಿಸುತ್ತದೆ. ಹಾಗಾಗಿಯೇ ಸತ್ತ ನಂತರ ಉಗುರುಗಳು ದೊಡ್ಡದಾಗಿ ಕಾಣುತ್ತವೆ.

4.ಸೂಡಾನ್ ಮತ್ತು ಸೌದಿ ಅರೇಬಿಯಾಗಳ ಕೆಲ ಪ್ರದೇಶಗಳಲ್ಲಿ ಜನರಿಗೆ ಈಗಲೂ ಶಿಲುಬೆಗೇರಿಸುವ ಮೂಲಕ ಮರಣದಂಡನೆಯನ್ನು ನೀಡುತ್ತಾರೆ. ಅಪರಾಧಿಯನ್ನು ಕಟ್ಟಿ, ಮೊಳೆ ಹೊಡೆದು ಶಿಲುಬೆಗೇರಿಸುವುದು ಅಥವಾ ದೊಡ್ಡ ಮರದ ದಿಮ್ಮಿಗೆ ಕಟ್ಟಿ ಕೆಲವು ದಿನಗಳು ಬಳಲಿಕೆ ಮತ್ತು ಉಸಿರಾಟದ ತೊಂದರೆಯಿಂದ ಸಾವನ್ನಪ್ಪುವವರೆಗೆ ಹಾಗೇ ಬಿಡುತ್ತಾರೆ.

5.ಭೂಮಿಗೆ ಮಾನವನ ಆಗಮನವಾದ ನಂತರ ಇದುವವರೆಗೆ ಸುಮಾರು 100 ಬಿಲಿಯನ್ ಜನ ಸತ್ತಿರಬಹುದು ಎನ್ನಲಾಗುತ್ತಿದೆ. ಅಂದರೆ ಸರಾಸರಿ 55.3 ಮಿಲಿಯನ್ ಜನ ಪ್ರತಿವರ್ಷ ಪ್ರಪಂಚದಲ್ಲಿ ಸಾಯುವ ಜನರ ಸಂಖ್ಯೆ. ಇನ್ನೂ ಸಿಂಪಲ್ ಆಗಿ ಹೇಳಬೇಕೆಂದರೆ ಪ್ರತಿದಿನ ವಿಶ್ವದಲ್ಲಿ 1,51,600 ಜನ ಪ್ರತಿ ದಿನ ಸಾಯುತ್ತಿದ್ದಾರೆ.

6.ಹೆರಿಗೆ ಸಮಯದಲ್ಲಿ ವಿಶ್ವದಲ್ಲಿ ಪ್ರತಿ 90 ಸೆಕೆಂಡುಗಳಿಗೆ ಒಬ್ಬ ಮಹಿಳೆ ಸಾಯುತ್ತಿದ್ದಾಳೆ
ಪ್ರತಿ 90 ಸೆಕೆಂಡುಗಳಿಗೆ ವಿಶ್ವದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಒಬ್ಬ ಮಹಿಳೆ ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾಳೆ. ಮಗುವಿನ ಜನ್ಮ ನೀಡಬೇಕಾದ ಗರ್ಭಿಣಿಯರು ತಾವೇ ಈ ಲೋಕ ತ್ಯಜಿಸುತ್ತಿರುವುದು ಗಂಭೀರವಾಗಿ ಯೋಚಿಸಬೇಕಾದ ವಿಷಯ.

7. 1939ರಲ್ಲಿ ಸರಣಿ ಹಂತಕಿ ಲೆಯೋನಾರ್ಡ್ ಸಿಯಾನ್ಸುಲ್ಲಿ ಎಂಬ ಹೆಸರಿನ ಇಟಲಿಯ ಮಹಿಳೆಯೊಬ್ಬಳಿದ್ದಳು. ಆಕೆ ಮೂವರು ಮಹಿಳೆಯರನ್ನು ಕೊಂದು ಅವರ ದೇಹದಿಂದ ಸೋಪು ಮತ್ತು ಟೀಕೇಕ್ ತಯಾರಿಸಿದ್ದಳು. ಸ್ವತಃ ಭವಿಷ್ಯ ಹೇಳುವವಳಾಗಿದ್ದ ಆಕೆಗೆ, ಎರಡನೇ ವಿಶ್ವಯುದ್ಧದ ಸಮಯದಲ್ಲಿ ಸೇನೆಗೆ ಸೇರುವವನಿದ್ದ ತನ್ನ ಹಿರಿಯ ಮಗನಿಗೆ ಒಳಿತಾಗಲು ನರಬಲಿಯ ಅಗತ್ಯವಿದೆ ಎನಿಸಿತ್ತು. ಹೀಗಾಗಿ ತನ್ನ ಬಳಿಗೆ ಭವಿಷ್ಯ ಹೇಳಿಸಿಕೊಳ್ಳಲು ಬರುತ್ತಿದ್ದ ಮೂವುರ ಮದ್ಯ ವಯಸ್ಕ ಮಹಿಳೆಯರನ್ನು ಹತ್ಯೆ ಮಾಡಿದ್ದಳು.

8. ಪ್ರತಿ 40 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯ ಆತ್ಮಹತ್ಯೆ
ಪ್ರಪಂಚದಲ್ಲಿ ಪ್ರತಿ 40 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. ನ್ಯೂಯಾರ್ಕ್ ನಗರದಲ್ಲಿ ಕೊಲೆಗಳಿಗಿಂತ ಆತ್ಮಹತ್ಯೆಗಳ ಸಂಖ್ಯೆಯೇ ಹೆಚ್ಚು.

9. ಭಾರತದಲ್ಲಿನ ಜಿಪ್ಸಿ ಬುಡಕಟ್ಟು ಜನಾಂಗವು ಸಾವುಳನ್ನು ಸಂಭ್ರದ ಕಾರ್ಯಕ್ರಮಗಳಂತೆ ಆಚರಿಸುತ್ತಾರೆ. ವಿಚಿತ್ರವೆಂದರೆ ಮಕ್ಕಳ ಜನನವಾದಾಗ ಮಾತ್ರ ಅವರಿಗೆ ನೋವಿನ ಸಂದರ್ಭವಂತೆ.

10. ವ್ಯಕ್ತಿಯ ಸಾವಿನ ಪ್ರಕ್ರಿಯೆಯಲ್ಲಿ ಎಲ್ಲಾ ಅಂಗಾಂಗಗಳೂ ಒಮ್ಮೆಲೇ ನಿಷ್ಕ್ರಿಯವಾಗುವುದಿಲ್ಲ. ಒಂದಾದ ನಂತರ ಮತ್ತೊಂದು ನಿಷ್ಕ್ರಿಯವಾಗುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಶ, ವಾಸನೆ, ದೃಷ್ಟಿ ಮತ್ತು ಕೊನೆಗೆ ಶ್ರವಣ ಶಕ್ತಿ ಕಳೆದುಕೊಳ್ಳೂತ್ತಾರೆ. ಹೀಗಾಗಿ ಅವರು ಸತ್ತಂತೆ ಕಾಣುತ್ತಿದ್ದರೂ ಸ್ವಲ್ಪ ಸಮಯ ಕೇಳಿಸಿಕೊಳ್ಳುವ ಶಕ್ತಿ ಇರುತ್ತದೆ.